Shimoga news | ರೈಲಿಗೆ ಸಿಲುಕಿ ಮೃತಪಟ್ಟ ವ್ಯಕ್ತಿ | ನಾಟಕ ಸಿದ್ಧತಾ ಶಿಬಿರ | ಅವಧಿ ವಿಸ್ತರಣೆ | ಕ್ರೀಡಾ ಶಾಲೆಗೆ ಆಯ್ಕೆ

FATA FAT NEWS 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರಾವತಿ – ಮಸರಹಳ್ಳಿ ರೈಲ್ವೆ ಮಾರ್ಗದಲ್ಲಿ ಸುಮಾರು 50 ರಿಂದ 55 ವರ್ಷದ ಅಪರಿಚಿತ ಪುರುಷ ರೈಲಿಗೆ ಸಿಕ್ಕು ಮೃತಪಟ್ಟಿರುತ್ತಾರೆ.
ವ್ಯಕ್ತಿಯ ಗುರುತು
ಈತನ ಚಹರೆ ಸುಮಾರು 5.5 ಅಡಿ ಎತ್ತರ, ಸಾದಾ ಕಪ್ಪು ಮೈ ಬಣ್ಣ, ತಲೆಯಲ್ಲಿ 2 ಇಂಚು ಕಪ್ಪು ಕೂದಲು ಬಿಟ್ಟಿದ್ದು, ಅರ್ಧ ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಗಡ್ಡ, ಮೀಸೆ ಇರುತ್ತದೆ. ಒಂದು ಕೆಂಪು ಬಣ್ಣದ ಕಪ್ಪು ಚುಕ್ಕೆಯುಳ್ಳ ಸ್ವೇಟರ್, ಒಂದು ಬಿಳಿ ಬಣ್ಣದ ಕಪ್ಪು ಗೆರೆಯುಳ್ಳ ಉದ್ದ ತೋಳಿನ ಶರ್ಟ್, ಸಿಮೆಂಟ್ ಕಲರ್ ಪ್ಯಾಂಟ್, ಒಂದು ಬಣ್ಣದ ಉಡುದಾರ, ಕಪ್ಪು ಬಣ್ಣದ ಚಪ್ಪಲಿಗಳು ಮತ್ತು ಕೆಂಪು, ಬಿಳಿ ಬಣ್ಣದ ಟವೆಲ್ ಧರಿಸಿರುತ್ತಾರೆ. ಮೃತನ ದೇಹವು ಮೆಗ್ಗಾನ್ ಆಸ್ಪತ್ರೆಯ ಶೈತ್ಯಾಗಾರದಲ್ಲಿರುತ್ತದೆ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ದೂ.ಸಂ.08182-222974, 9480802124 ನ್ನು ಸಂಪರ್ಕಿಸಬಹುದೆಂದು ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

one click many news logo

ನ್ಯೂಸ್ 2- ಕಲಾವಿದರಿಂದ ಅರ್ಜಿ ಆಹ್ವಾನ

SHIMOGA: ಶಿವಮೊಗ್ಗ ರಂಗಾಯಣವು (shivamogga rangayana) ರಂಗ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದು ರಂಗ ಕಲೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನುರಿತ ರಂಗ ನಿರ್ದೇಶಕರಿಂದ ರಂಗ ಕಲಾವಿದರಿಗಾಗಿ ನಾಟಕ ಸಿದ್ದತಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಹೊಸ ನಾಟಕವನ್ನು ಶಿಬಿರಾರ್ಥಿಗಳಿಂದ ಸಿದ್ದಪಡಿಸಲಾಗುವುದು. ಸಿದ್ದಗೊಂಡ ನಾಟಕ ಪ್ರದರ್ಶನವನ್ನು ರಂಗಾಯಣ, ಶಿವಮೊಗ್ಗದಲ್ಲಿ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಕನಿಷ್ಟ 05 ಪ್ರದರ್ಶನಗಳನ್ನು ಏರ್ಪಡಿಸಲಾಗುವುದು. ಈ ಶಿಬಿರವು ಜನವರಿ 2024 ರ ಮಾಹೆಯಲ್ಲಿ 20 ದಿನಗಳವರೆಗೆ ಬೆಳಗ್ಗಿನಿಂದ ಸಂಜೆವರೆಗೆ ಪೂರ್ಣಾವಧಿ ತರಬೇತಿ ನಡೆಯುತ್ತದೆ.
₹12 ಸಾವಿರ ಗೌರವ ಸಂಭಾವನೆ
ಶಿಬಿರಾರ್ಥಿಗಳ ವಯಸ್ಸು ಕನಿಷ್ಠ 20 ರಿಂದ ಗರಿಷ್ಠ 40 ದೊಳಗಿರಬೇಕು. ಆಯ್ಕೆಯಾದ ಶಿಬಿರಾರ್ಥಿಗಳಿಗೆ ₹12 ಸಾವಿರಗಳ ಗೌರವ ಸಂಭಾವನೆ ಹಾಗೂ ಮಧ್ಯಾಹ್ನದ ಸಾಮಾನ್ಯ ಊಟ, ಸಂಜೆ ಸ್ನ್ಯಾಕ್ಸ್, ಚಹಾ ಒದಗಿಸಲಾಗುವುದು. 12 ಜನರಿಗೆ ಅವಕಾಶವಿದೆ. 20 ದಿನಗಳು ನಿರಂತರವಾಗಿ ಶಿಬಿರ ನಡೆಯಲಿದೆ. ರಂಗಾಯಣದ ನಿಬಂಧನೆ ಹಾಗೂ ಷರತ್ತುಗಳಿಗೆ ಒಳಪಟ್ಟು ಆಸಕ್ತ ಕಲಾವಿದರು ಬಿಳಿ ಹಾಳೆಯಲ್ಲಿ ಸ್ವವಿವರದೊಂದಿಗೆ ಜನವರಿ 5ರೊಳಗೆ ಆಡಳಿತಾಧಿಕಾರಿಗಳು, ರಂಗಾಯಣ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ-577201 ಇಲ್ಲಿಗೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ admn.rangayanashivamogga@gmail.comಮೂಲಕ ಕಳುಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಚೇರಿ ದೂ.ಸಂ: 08182-256353, 7975229166 ನ್ನು ಸಂಪರ್ಕಿಸಬಹುದೆಂದು ರಂಗಾಯಣದ ಆಡಳಿತಾಧಿಕಾರಿ ತಿಳಿಸಿದ್ದಾರೆ.

READ |  ಕೋವಿಡ್ ಗೆ ಶಿವಮೊಗ್ಗದಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ? ಡಿಸಿ ಖಡಕ್ ವಾರ್ನಿಂಗ್

ನ್ಯೂಸ್ 3- ಅರ್ಜಿ ಅವಧಿ ವಿಸ್ತರಣೆ

SHIMOGA: ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ವತಿಯಿಂದ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಧನಶ್ರೀ ಯೋಜನೆಗಳಿಗೆ ಆಹ್ವಾನಿಸಲಾಗಿದ್ದ ಅರ್ಜಿ ಅವಧಿಯನ್ನು ಡಿ.29 ರವರೆಗೆ ವಿಸ್ತರಿಸಲಾಗಿದೆ.
2023-24 ನೇ ಸಾಲಿಗೆ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ, ಧನಶ್ರೀ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಚೇತನ ಯೋಜನೆ ಹಾಗೂ ಉದ್ಯೋಗಿನಿ ಯೋಜನೆಗಳಡಿ ಸೇವಾಸಿಂಧು ಮೂಲಕ ಆನ್‍ಲೈನ್ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಡಿ.22 ಕಡೆಯ ದಿನವೆಂದು ನಿಗದಿಪಡಿಸಲಾಗಿತ್ತು. ಇದೀಗ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಮತ್ತು ಧನಶ್ರೀ ಯೋಜನೆಳಿಗೆ ಮಾತ್ರ ಡಿ.29 ವರೆಗೆ ಅರ್ಜಿ ಅವಧಿ ವಿಸ್ತರಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದಿದ ಇಲಾಖೆ, 100 ಅಡಿ ರಸ್ತೆ, ಆಲ್ಕೊಳ, ಶಿವಮೊಗ್ಗ ಜಿಲ್ಲೆ ಹಾಗೂ ಜಿಲ್ಲಾ ಅಭಿವೃದಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಕಚೇರಿ ಶಿವಮೊಗ್ಗ ಹಾಗೂ ತಾಲ್ಲೂಕು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ದೂ.ಸಂ: 08182-295514 ನ್ನು ಸಂಪರ್ಕಿಸಬಹುದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Market news Logo

ನ್ಯೂಸ್ 4- ತಾಲ್ಲೂಕು ಮಟ್ಟದ ಆಯ್ಕೆ ದಿನಾಂಕ ಬದಲಾವಣೆ

SHIMOGA: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುತ್ತಿರುವ 2024-25ನೇ ಸಾಲಿನ  ಪ್ರವೇಶಕ್ಕೆ ಕ್ರೀಡಾ ಶಾಲೆ/ ಕ್ರೀಡಾ ನಿಲಯಗಳಿಗೆ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಅಥ್ಲೆಟಿಕ್ಸ್, ಹಾಕಿ, ಫುಟ್‍ಬಾಲ್, ಕುಸ್ತಿ ಕ್ರೀಡೆಗಳಿಗೆ ವಿವಿಧ ಮಟ್ಟಗಳಲ್ಲಿ ಆಯ್ಕೆಯನ್ನು ನಡೆಸಲು ದಿನಾಂಕ ನಿಗದಿಗೊಳಿಸಲಾಗಿರುತ್ತದೆ.
ಸೊರಬ ತಾಲ್ಲೂಕು ಮಟ್ಟದ ಕ್ರೀಡಾ ಶಾಲೆಯ ಆಯ್ಕೆಯನ್ನು ಮೊದಲು ಡಿ.26 ರಂದು ನಡೆಸಬೇಕೆಂದು ನಿರ್ಧರಿಸಲಾಗಿತ್ತು. ಇದೀಗ ಅದರ ಬದಲಾಗಿ ಡಿ.27 ರಂದು ನಡೆಸಬೇಕೆಂದು ತೀರ್ಮಾಡಿಸಲಾಗಿದೆ. ಆನವಟ್ಟಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗೆ ಬಾಳಪ್ಪ ಮಾನೆ ಮೊ.ಸಂ: 9880653266, ಪಿ.ವಿ.ನಾಗರಾಜ್ 9964599936 ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Adoption Process | ಮಕ್ಕಳಿಲ್ಲವೇ, ಚಿಂತೆ ಬೇಡ, ಇಲ್ಲಿದೆ ಪೋಷಕರ ಮಡಿಲು ತುಂಬುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ

error: Content is protected !!