Tunga Bridge | ತುಂಗಾನದಿಗೆ ಮತ್ತೊಂದು ಸೇತುವೆ ಲೋಕಾರ್ಪಣೆ, ವಾಹನ ಸಂಚಾರವೂ ಆರಂಭ, ಹೇಗಿದೆ ಸೇತುವೆ?

Tunga bridge Bypass

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತುಂಗಾ ನದಿ ಬೈಪಾಸ್ ಬಳಿ ನಿರ್ಮಿಸಿರುವ ಸೇತುವೆಯನ್ನು ಭಾನುವಾರ ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಾರ್ಪಣೆಗೊಳಿಸಿದರು.
ಅತ್ಯಂತ ಸುಂದರವಾಗಿ ಹಳೇ ಸೇತುವೆಯ ಪಕ್ಕವೇ ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ನಿರ್ಮಾಣ ಮಾಡಲಾಗಿದೆ. ಅಂದಾಜು 20.16 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಸಿದ್ಧವಾಗಿದೆ.

tunga bridge

READ | ಶಿವಮೊಗ್ಗದಲ್ಲಿ ಬೈಕ್, ಕಾರು ಪಾರ್ಕಿಂಗ್, ನಾನ್ ಪಾರ್ಕಿಂಗ್ ಝೋನ್, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಸಂಚಾರ ದಟ್ಟಣೆಗೆ ಬೇಕಿತ್ತು ಸೇತುವೆ
ಬೈಪಾಸ್ ನಿಂದ ಸಾಕಷ್ಟು ವಾಹನಗಳ ಸಂಚಾರವಿದೆ. ಬೃಹತ್ ವಾಹನಗಳು ಸಂಚರಿಸುವುದರಿಂದ ಸಹಜವಾಗಿಯೇ ಟ್ರಾಫಿಕ್ ಜಾಮ್ ಆಗುತ್ತಿತ್ತು. ಈ ಭಾಗದಲ್ಲಿ ಸೇತುವೆಯ ಅವಶ್ಯಕತೆ ಇತ್ತು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ವಾಹನಗಳ ಓಡಾಟವೂ ಆರಂಭಗೊಂಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಹೇಳಿದರು.
ಬಹುವರ್ಷಗಳ ಬೇಡಿಕೆ
ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ತುಂಗಾ ನದಿಗೆ ಅಡ್ಡಲಾಗಿದೆ. ಸೇತುವೆ ನಿರ್ಮಾಣ ಮಾಡಬೇಕಿತ್ತು. ಅದಕ್ಕಾಗಿ ಜನರಿಂದ ಬೇಡಿಕೆಯೂ ಇತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಕನಸಿನ ಫಲವಾಗಿ ಇಂದು ನನಸಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ (S.N.Channabasappa) ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಜಗದೀಶ್, ವಾರ್ಡ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!