Crime news | ಪಿಪಿ ಮಾರಲು ಬಂದ ಬಾಲಕ ಶವವಾದ | ಶುಂಠಿ ಕಣದಲ್ಲಿ ನೀರು ಹರಿಸಲು ಹೋದವನಿಗೆ ಗುಂಡೇಟು

Crime news

 

 

ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತೀರ್ಥಹಳ್ಳಿಯಲ್ಲಿ ತುಂಗಾ ನದಿ ಪಾಲಾಗಿದ್ದ ಬಾಲಕನ‌‌ ಶವ ಪತ್ತೆಯಾಗಿದೆ. ಎಳ್ಳಮಾವಸ್ಯೆ ಜಾತ್ರೆ ಅಂಗವಾಗಿ ಪಿಪಿ ಅಂಗಡಿ ಇಡಲು ಬಿಹಾರ ಮೂಲದ ಆರೀಫ್ (13) ತಮ್ಮ‌ ತಂದೆಯೊಂದಿಗೆ ಬಂದಿದ್ದರು. ಈಜಲು‌ ತೆರಳಿದಾಗ ಆಕಸ್ಮಿಕವಾಗಿ ಕಾಲು ಜಾರಿಬಿದ್ದು ಆತ ನದಿ ಪಾಲಾಗಿದ್ದ. ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು, ಮುಳುಗು ತಜ್ಞರ ಸಹಾಯದಿಂದ ಶವ ಹೊರತೆಗೆಯಲಾಗಿದೆ.

Crime logo

READ | ಸಾರ್ವಜನಿಕರೇ ಗಮನಿಸಿ, ಶಿವಮೊಗ್ಗದಲ್ಲಿ ಇಂದು ಬಸ್ ಸಂಚಾರದಲ್ಲಿ ವ್ಯತ್ಯಯ

ಯುವನಿಗೆ ಗುಂಡೇಟು

SAGAR: ಶುಂಠಿ ಗದ್ದೆಗೆ ನೀರು ಬಿಡಲು‌ ಸ್ನೇಹಿತರೊಂದಿಗೆ ಹೋಗಿದ್ದ ಯುವಕನೊಬ್ಬನ‌ ಕಾಲಿಗೆ ಗುಂಡೇಟು ಬಿದ್ದಿದ್ದು, ಎಲ್ಲಿಂದ ಯಾರು ಗುಂಡು ಹಾರಿಸಿದ್ದಾರೆ ಎಂಬುದು ನಿಗೂಢವಾಗಿದೆ.
ತಾಲೂಕಿನ ಮಾಲ್ವೆ ಗ್ರಾಮದ ಬಿಂದು ಎಂಬುವವರೊಂದಿಗೆ ಹೊಲಕ್ಕೆ‌ ಬಂದಿದ್ದ ರವಿ‌ ಎಂಬುವವರ ಕಾಲಿಗೆ ಗುಂಡು ಹಾರಿಸಲಾಗಿದೆ. ಬೇಟೆಗಾರರು ಗುಂಡು ಹಾರಿಸಿರಬಹುದು ಎಂದು ಶಂಕಿಸಲಾಗಿದೆ. ಗಾಯಾಳುವನ್ನು ಸಾಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿನ ಸದ್ದು ಮಾತ್ರ ಕೇಳಿತ್ತು
ಬಿಂದು ನೀರಿನ ಪೈಪ್ ಸರಿಪಡಿಸಲು ಹೋದಾಗ ಗುಂಡು ಹಾರಿಸಿದ ಸದ್ದು ಕೇಳಿಸಿದೆ. ಅದರ ಬೆನ್ನಲ್ಲೇ ಗುಡಿಸಿಲಿನ ಪಕ್ಕದಲ್ಲಿದ್ದ ರವಿ ಕೂಗಿದ್ದಾನೆ. ಬೇಟೆಗಾರರು ಗುಂಡು ಹಾರಿಸಿರುವ ಶಂಕೆ ಇದೆ ಎಂದು ಆರೋಪಿಸಲಾಗಿದೆ.‌ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!