Farmer Protest | ಕಾಡಾ ನಿರ್ಧಾರಕ್ಕೆ ರೈತರ ಆಕ್ರೋಶ, ಗಂಟೆಗಟ್ಟಲೇ ಟ್ರಾಫಿಕ್ ಜಾಮ್

Farmer protest

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಭದ್ರ ಅಚ್ಚುಕಟ್ಟು ಪ್ರಾಧಿಕಾರದ ಸಭೆಯಲ್ಲಿ ಭದ್ರಾ ಜಲಾಶಯದಿಂದ ಎರಡೂ ನಾಲೆಗಳಿಗೆ ನೀರು ಹರಿಸುವ ಬಗ್ಗೆ ಕೈಗೊಂಡ ನಿರ್ಧಾರಕ್ಕೆ ರೈತರು ವಿರೋಧಿಸಿದ್ದಾರೆ. ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆದು ಪ್ರತಿಭಟನೆ ಮಾಡಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು.
ಎಡದಂಡೆ ನಾಲೆಗೆ ಜ.10ರಿಂದ ಮತ್ತು ಬಲದಂಡೆ ನಾಲೆಗೆ ಜ.20ರಿಂದ ನೀರು ಹರಿಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಇದರಿಂದ ಎರಡು ಭಾಗದ ರೈತರ ಬೆಳೆ ನಾಶವಾಗಲಿದೆ. ಬರಗಾಲ ಸ್ಥಿತಿ ಇದ್ದು, ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಕುಡಿಯುವುದಕ್ಕೂ ನೀರಿನ ಕೊರತೆ ಎದುರಾಗಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

READ |  ಭದ್ರಾ ಎಡ, ಬಲ ನಾಲೆಗಳಿಗೆ ನೀರು ಹರಿಸಲು ಡೇಟ್ ಫಿಕ್ಸ್, ಆನ್‌- ಆಫ್ ಮಾದರಿಯಲ್ಲಿ‌ ಪೂರೈಕೆ, ಯಾರು ಏನೆಂದರು?

ಎಡದಂಡೆ ನಾಲೆಯ ವ್ಯಾಪ್ತಿಯಲ್ಲಿ 25 ಸಾವಿರ ಹೆಕ್ಟೆರ್ ಇದ್ದು, ಬಲದಂಡೆ ನಾಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆ ಬೆಳೆದಿದ್ದು, ಈಗಿನ ಪ್ರಕಾರ ನಿಗದಿತ ಅವಧಿಯಲ್ಲಿ ನೀರು ಹರಿಸಿದರು ಕೂಡ ಕೊನೆಯ ಭಾಗದ ರೈತರಿಗೆ ತಲುಪುವುದು ಕಷ್ಟ ಎಂಬ ಆರೋಪಗಳು ಕೇಳಿಬಂದವು.
ರಸ್ತೆ ತಡೆದಿದ್ದಕ್ಕೆ ಟ್ರಾಫಿಕ್ ಜಾಮ್
ಸಚಿವ ಮಧು ಬಂಗಾರಪ್ಪ ರೈತರಿಗೆ ಭೇಟಿ ಆಗದ ಕಾರಣ ಸಿಟ್ಟಿಗೆದ್ದ ರೈತರು ಏಕಾಏಕಿ ರಸ್ತೆ ತಡೆ ನಡೆಸಿದರು. ಇದರಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಯಿತು. ರೈತರನ್ನು ನಿಯಂತ್ರಿಸಲು ಪೆÇಲೀಸರು ಹರಸಾಹಸಪಟ್ಟರು.
ಶಾಸಕ ಸಂಗಮೇಶ್ ರೈತ ನಾಯಕ ಎಚ್.ಆರ್.ಬಸವರಾಜಪ್ಪ, ಕೆ.ಟಿ.ಗಂಗಾಧರ್ ಅವರವನ್ನು ರೈತರು ಘೆರಾವು ಹಾಕಿದರು.

error: Content is protected !!