Bison death | ಕೃಷಿ‌ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡ ಕಾಡುಕೋಣ

Bison death

 

 

ಸುದ್ದಿ ಕಣಜ.ಕಾಂ ಸೊರಬ
SORABA: ತಾಲೂಕಿನ ಅಂದವಳ್ಳಿ ಗ್ರಾಮದಲ್ಲಿ ಕಾಡುಕೋಣವೊಂದು ಕೃಷಿ ಹೊಂಡಕ್ಕೆ ಬಿದ್ದು ಮುಳುಗಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.
ನೀರು ಕುಡಿಯಲು ಬಂದಾಗ ಘಟನೆ?
ಕಾಡುಕೋಣ ನೀರು ಹುಡುಕಿಕೊಂಡು ಗುರುವಾರ ರಾತ್ರಿ ಬಂದಿದ್ದು, ಹೊಂಡದಲ್ಲಿ ಬಿದ್ದು ಮುಳುಗಿದೆ ಎಂದು ಹೇಳಲಾಗಿದೆ.‌ ಶುಕ್ರವಾರ ಬೆಳಗ್ಗೆ ಕಾಡುಕೋಣ ಮೃತಪಟ್ಟ ವಿಚಾರ ಗಮನಕ್ಕೆ ಬಂದಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

READ | ಯುವತಿಗೆ ಕೆಎಫ್‍ಡಿ ಪಾಸಿಟಿವ್, ಹೇಗಿದೆ ಆರೋಗ್ಯ ಸ್ಥಿತಿ?

ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿ ಸಹಾಯದಿಂದ ಕಾಡುಕೋಣವನ್ನು ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕಾಡಿನಲ್ಲಿ ಹೂತು ಹಾಕಲಾಗಿದೆ ಎಂದು ತಿಳಿದುಬಂದಿದೆ.
ಡಿಎಫ್‌ಒ ಸಂತೋಷ್ ಕೆಂಚಪ್ಪ, ಎಸಿಎಫ್ ಶ್ರೀಧರ್, ವಲಯ ಅರಣ್ಯಾಧಿಕಾರಿ ಜಾವಿದ್ ಬಾಷಾ ಇತರರು ಉಪಸ್ಥಿತರಿದ್ದರು.

error: Content is protected !!