Grama One | ‘ಗ್ರಾಮ ಒನ್’ಗಳಲ್ಲಿ ಖಾಲಿ‌‌ ಹುದ್ದೆಗಳ ಭರ್ತಿ, ಕೂಡಲೇ‌ ಅರ್ಜಿ ಸಲ್ಲಿಸಿ, ಎಲ್ಲಿ‌ ಎಷ್ಟು‌ ಹುದ್ದೆ ಖಾಲಿ?

Grama one

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಜಿಲ್ಲೆಯಲ್ಲಿ ಗ್ರಾಮ ಒನ್ (Grama one) ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸೇವೆ ನೀಡಲು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

READ |  ಗ್ರಂಥಾಲಯಗಳಲ್ಲಿ ಉದ್ಯೋಗ ಅವಕಾಶ, ಎಲ್ಲಿ ಎಷ್ಟು ಹುದ್ದೆಗಳು ಖಾಲಿ?

ಗ್ರಾಮ ಒನ್ ಯೋಜನೆ ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಯಾಗಿದ್ದು ಗ್ರಾಮೀಣ ಜನತೆಗೆ ವಿವಿಧ ಸೇವೆಗಳನ್ನು ಒದಗಿಸಲು ಏಕಗವಾಕ್ಷಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರಿ ಸೇವೆಗಳನ್ನು ಪಡೆಯಲು ಗ್ರಾಮೀಣ ಭಾಗದ ಜನರ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ಆರಂಭಗೊಂಡ ಗ್ರಾಮ ಒನ್ ಯೋಜನೆಯು ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮವಾಗಿ ಸ್ಪಂದನೆ ವ್ಯಕ್ತವಾಗುತ್ತಿದೆ.
ಯಾವೆಲ್ಲ ಗ್ರಾಮ ಒನ್ ಗಳಲ್ಲಿ‌ ಹುದ್ದೆಗಳು ಖಾಲಿ?       
ಈ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಭ್ರದ್ರಾವತಿ ತಾಲೂಕಿನ ಕೊಮ್ಮನಹಳ್ಳಿ -1, ಹೊಸನಗರ ತಾಲೂಕಿನ ತಿರ್ನಿವೆ -1, ಬೆಳ್ಳೂರು -1, ಸಾಗರ ತಾಲೂಕಿನ ತಳವಾಟ-1 ಮಾಳ್ವೆ- 1 ಚೆನ್ನಗೊಂಡ -1, ಕುದರೂರು -1, ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ -1 , ಶಿವಮೊಗ್ಗ ತಾಲೂಕಿನ ಗಾಜನೂರು-1,  ಸೊರಬ ತಾಲೂಕಿನ- ಮುದ್ದಿದೊಡ್ಡಿಕೊಪ್ಪ-1, ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿ-1 ಆಗುಂಬೆ-1 ಹುದ್ದೆ ಖಾಲಿ ಇದ್ದು ಆಸಕ್ತರು ವೆಬ್‍ಸೈಟ್ https:/www.Karnatakaone.gov.in/Public/GramaOneFranchiseeTerms ನಲ್ಲಿ ದಿನಾಂಕ: 02-02-2024 ರಿಂದ 15-02-2024 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು  ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!