Kuvempu university | ಅಂದು ಕುವೆಂಪು ವಿವಿ ಹಳೆ ವಿದ್ಯಾರ್ಥಿ, ಇಂದು ಕುಲಸಚಿವನಾಗಿ ಅಧಿಕಾರ ಸ್ವೀಕಾರ

Kuvempu University registrar

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯದ (kuvempu university) ಆಡಳಿತ ಕುಲಸಚಿವರಾಗಿ ನೇಮಕಗೊಂಡಿದ್ದ ಎಚ್.ಬಿ.ವಿಜಯ್‍ಕುಮಾರ್ (HB Vijaykumar ) ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಕುವೆಂಪು ವಿವಿಗೆ ಹೊಸ ಕುಲಸಚಿವರನ್ನು ನಿಯುಕ್ತಿಗೊಳಿಸಿ ಫೆ.2ರಂದು ಸರ್ಕಾರ ಆದೇಶ ಹೊರಡಿಸಿತ್ತು. ಸೋಮವಾರ ಬೆಳಗ್ಗೆ ಹೊಸ ಕುಲಸಚಿವರಾದ ಕೆಎಎಸ್ ಅಧಿಕಾರಿ ವಿಜಯ್ ಕುಮಾರ್ ಕರ್ತವ್ಯ ಆರಂಭಿಸಿದ್ದಾರೆ. ಇವರು ಈ ಹಿಂದೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದು, 2014ರ ಬ್ಯಾಚ್‍ನಲ್ಲಿ ಕೆಎಎಸ್‍ಗೆ ಆಯ್ಕೆಯಾಗಿದ್ದಾರೆ.

Kuvempu University Registrar
ಎಚ್.ಬಿ.ವಿಜಯ್‍ಕುಮಾರ್, ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವ

READ | ಶಿವಮೊಗ್ಗದಲ್ಲಿ ಒಂದೇ ದಿನ 11 ಜನರಿಗೆ ಮಂಗನ ಕಾಯಿಲೆ, ಜನರಲ್ಲಿ ಭೀತಿ, ಎಲ್ಲೆಲ್ಲಿ ಎಷ್ಟು ಪಾಸಿಟಿವ್?

ಅಂದು ಹಳೇ ವಿದ್ಯಾರ್ಥಿ, ಇಂದು ಕುಲಸಚಿವ
ಮೂಲತಃ ಚನ್ನಗಿರಿ ತಾಲೂಕಿನವರಾದ ವಿಜಯ್‍ಕುಮಾರ್ 2018ರ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದಾರೆ. ಕುವೆಂಪು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಅವರು ಪ್ರಸ್ತುತ ಕುವೆಂಪು ವಿವಿಗೆ ಆಡಳಿತ ಕುಲಸಚಿವರಾಗಿ ಸೇವೆ ಸಲ್ಲಿಸಲು ನಿಯುಕ್ತಿಗೊಂಡು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ವಿವಿಯ ಕುಲಪತಿ ಎಸ್ ವೆಂಕಟೇಶ್, ಪರೀಕ್ಷಾಂಗ ಕುಲಸಚಿವ ಎಂ ಎಸ್ ಗೋಪಿನಾಥ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಸತ್ಯಪ್ರಕಾಶ್ ಎಂ ಆರ್ ಸೇರಿಂದತೆ ವಿವಿಧ ಆಡಳಿತಾಧಿಕಾರಿಗಳು ಹಾಜರಿದ್ದರು.

error: Content is protected !!