KFD Updates | ಮುಂದುವರಿದ ಮಂಗನ ಕಾಯಿಲೆ ಕಾಟ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಎಷ್ಟು ಜನರಿಗೆ ಪಾಸಿಟಿವ್?

kfd

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಲೆನಾಡಿನ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ (KFD) ಕಾಟ ಮುಂದುವರಿದಿದೆ. ಬುಧವಾರ ಶಿವಮೊಗ್ಗ, ಚಿಕ್ಕಮಗಳೂರು ‌ಮತ್ತು ಉತ್ತರ ಕನ್ನಡ ಸೇರಿ ಏಳು ಜನರಿಗೆ ಪಾಸಿಟಿವ್ ಬಂದಿದೆ.

Health tips

READ | ಶಿವಮೊಗ್ಗದಲ್ಲಿ ಮತ್ತೆ ಕೆ.ಎಫ್.ಡಿ ಪಾಸಿಟಿವ್, ಇದುವರೆಗೆ ಎಷ್ಟು ಜನರಿಗೆ ಸೋಂಕು ತಗುಲಿದೆ?

ಎಲ್ಲಿ‌ ಎಷ್ಟು ಪಾಸಿಟಿವ್?

  • ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತುದೂರು ಮತ್ತು ಕೋಣಂದೂರಿನಲ್ಲಿ ಇಬ್ಬರಿಗೆ ಕೆ.ಎಫ್.ಡಿ ದೃಢಪಟ್ಟಿದೆ. 156 ಮಾದರಿಗಳನ್ನು ಪರೀಕ್ಷಿಸಿದ್ದು ಅದರಲ್ಲಿ ಒಬ್ಬರಿಗೆ ಸೋಂಕು ತಗುಲಿದೆ. ಇದುವರೆಗೆ 34 ಪ್ರಕರಣಗಳು ಕಂಡುಬಂದಿದ್ದು, 21 ಜನ‌ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 12 ಸಕ್ರಿಯ ಪ್ರಕರಣಗಳಿವೆ.
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊಪ್ಪ ತಾಲೂಕು‌ ಬಪ್ಪುಂಜಿದಲ್ಲಿ ಒಂದು, ನರಸಿಂಹರಾಜಪುರ ತಾಲೂಕು ಕಟ್ಟಿಮನೆ, ಗುದ್ದಿಗೆ ಗ್ರಾಮದಲ್ಲಿ ಮೂವರಿಗೆ ಸೋಂಕು ತಗುಲಿದೆ. 26 ಮಾದರಿಗಳನ್ನು ಪರೀಕ್ಷಿಸಿದ್ದು, ಅದರಲ್ಲಿ ನಾಲ್ಕು ಪಾಸಿಟಿವ್ ಬಂದಿವೆ. ಜಿಲ್ಲೆಯಲ್ಲಿ ಇದುವರೆಗೆ 26 ಜನರಿಗೆ ಸೋಂಕು ತಗುಲಿದ್ದು, ಆರು ಜನ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾದರೆ ಇನ್ನೂ 16 ಸಕ್ರಿಯ ಪ್ರಕರಣಗಳಿವೆ‌.
  • ಉತ್ತರ ಕನ್ನಡದಲ್ಲಿ ಆರು ಮಾದರಿಗಳನ್ನು ಸ್ವೀಕರಿಸಿದ್ದು, ಪರೀಕ್ಷೆ ಬಳಿಕ ಒಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದುವರೆಗೆ ಅತ್ಯಧಿಕ 40 ಪ್ರಕರಣಗಳು ಕಂಡುಬಂದಿವೆ. 36 ಜನ ಗುಣಮುಖರಾಗಿದ್ದು, ನಾಲ್ಕು ಸಕ್ರಿಯ ಪ್ರಕರಣಗಳಿವೆ.

error: Content is protected !!