Death | ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋದ ಯುವಕ ಸಾವು

Tunga river

 

 

ಸುದ್ದಿ ಕಣಜ.ಕಾಂ ಹೊಳೆಹೊನ್ನೂರು
HOLEHONNUR: ಕೂಡಲಿ ಗ್ರಾಮದ ತುಂಗ ಮತ್ತು ಭದ್ರಾ ನದಿಗಳ ಸಂಗಮ ಸ್ಥಳದಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

READ | ಕೊಟ್ಟಿದ್ದ ಸಾಲ ವಾಪಸ್ ಕೇಳಿದ್ದಕ್ಕೆ ಮರ್ಡರ್, ತಪ್ಪು ಒಪ್ಪಿಕೊಂಡ ಆರೋಪಿ

ಮೃತನನ್ನು ಅಣ್ಣಾನಗರ ನಿವಾಸಿ ಮುಬಾರಕ್ (18) ಎಂದು ಗುರುತಿಸಲಾಗಿದೆ. ಹೊಳೆಹೊನ್ನೂರಿನ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಶಿವಮೊಗ್ಗದಿಂದ ಹೊರಟಿದ್ದ ಈತ ಸ್ನಾನ ಮಾಡಲು ತೆರಳಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!