Randeep Surjewala | ಬಿಜೆಪಿ ಸಾಧನೆ ‘ಚೊಂಬು’, ಸುರ್ಜೆವಾಲಾ ಹೀಗೇಕೆ ಹೇಳಿದರು, ಅವರ ಆರೋಪಗಳೇನು?

Surjewala

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಜ್ಯದಲ್ಲಿ ಪ್ರಸ್ತುತ ‘ಚೊಂಬು’ ರಾಜಕಾರಣ ಜೋರಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲ ಪತ್ರಿಕೆಗಳಿಗೆ ಜೊಂಬಿನ ಜಾಹೀರಾತು ನೀಡಿದ ಬಳಿಕ ಇದು ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಇದೇ ಚೊಂಬನ್ನು ಪ್ರಸ್ತಾಪಿಸಿ, ಬಿಜೆಪಿ ವಿರುದ್ಧ ಪ್ರಖರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ರಾಜ್ಯಕ್ಕೆ ಸಿಕ್ಕಿರುವುದು ಬರೀ ಚೊಂಬು. ಬರ ಪರಿಹಾರ ಕೇಳಿದರೆ, ಉದ್ಯೋಗ ನೀಡುವಂತೆ ಕೇಳಿದರೆ, ನೀಡಿದ ಭರವಸೆಯಂತೆ 15 ಲಕ್ಷ ರೂ. ನೀಡುವಂತೆ ಏನೇ ಕೇಳಿದರೂ ಬಿಜೆಪಿ ನೀಡಿದ್ದು ಚೊಂಬಷ್ಟೆ ಎಂದು ಆರೋಪಿಸಿದರು.

READ | ನಾಮಪತ್ರ ಸಲ್ಲಿಕೆ ದಿನಾಂಕ‌ ಮುಕ್ತಾಯ, ಸಲ್ಲಿಕೆಯಾದ ನಾಮಪತ್ರಗಳೆಷ್ಟು?

ಸುರ್ಜೇವಾಲ ಟೀಕಾಪ್ರಹಾರ

  1. ಕಾಂಗ್ರೆಸ್ ಗ್ಯಾರಂಟಿ ಕಾಪಿರೈಟ್, ಮೋದಿ ಬಳಕೆ
    ಗ್ಯಾರಂಟಿಗಳನ್ನು ಘೋಷಿಸಿದಾಗ ವ್ಯಂಗ್ಯವಾಡಿದ ಮೋದಿ ಅವರು ಈಗ ಅದೇ ಗ್ಯಾರಂಟಿ ಕಾಪಿರೈಟ್ ಬಳಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
  2. ಕೇಂದ್ರಿಂದ ಅಕ್ಕಿ ಕೊಡುವಂತೆ ಕೇಳಿದರೆ, ವ್ಯಾಪಾರಿಗಳಿಗೆ ಮಾರಾಟ ಮಾಡುತ್ತೇವೆಯೇ ವಿನಹ ರಾಜ್ಯಕ್ಕೆ ಕೊಡುವುದಿಲ್ಲ ಎಂದಿದ್ದರು. ಆದರೂ ಕಾಂಗ್ರೆಸ್ ನೀಡಿದ ಭರವಸೆಯಂತೆ ಹಣ ನೀಡಿದೆ.
  3. ಜಿಎಸ್.ಟಿ ಹಣದ ಪಾಲು ಕೊಡುವಂತೆ ಕೇಳಿದರೂ ಇದುವರೆಗೆ ನಯಾಪೈಸೆ ಕೊಟ್ಟಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಜಿಎಸ್.ಟಿನಲ್ಲಿರುವ ಸ್ಲ್ಯಾಬ್ ಗಳನ್ನು ರದ್ದುಪಡಿಸಲಾಗುವುದು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಿ.ಕೆ.ಸಂಗಮೇಶ್, ಪ್ರಮುಖರಾದ ಎಚ್.ಸಿ.ಯೋಗೇಶ್, ಎಚ್.ಎಸ್.ಸುಂದರೇಶ್, ಮಂಜುನಾಥ್ ಭಂಡಾರಿ, ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.

error: Content is protected !!