ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ಬೇಸಿಗೆಯಿಂದ ಬೇಸತ್ತ ಮನಸುಗಳಿಗೆ ತಂಪು ಅನುಭವವನ್ನೂ ನೀಡಿದೆ. ಶನಿವಾರ ಬೆಳಗಿನ ಜಾವ ಸಹ ಮಳೆ ಸುರಿದಿದೆ.
ಶಿವಮೊಗ್ಗ ನಗರದಲ್ಲಿ ಮಳೆ ಸುರಿಯುತ್ತಿಲ್ಲವಾದರೂ ಶನಿವಾರ ಬೆಳಗ್ಗೆಯಿಂದಲೇ ತಂಪು ವಾತಾವರಣವಿದೆ. ರಾತ್ರಿಯೂ ಮಳೆಯಾಗಿದೆ.
READ | ಶಿವಮೊಗ್ಗದಲ್ಲಿ ಸಿಡಿಲು ಬಡಿದು ರೈತ ಸಾವು, ಇನ್ನೊಬ್ಬನಿಗೆ ಗಾಯ
ಎಲ್ಲಿ ಏನೇನು ನಷ್ಟ?
→ ಆನಂದಪುರ ಸುತ್ತಮುತ್ತ ಇಂದು ಬೆಳಗ್ಗೆಯೂ ಧಾರಾಕಾರ ಮಳೆಯಾಗಿದೆ. ನಿನ್ನೆ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಬೈರಾಪುರ ಗ್ರಾಮದ ನಿತ್ಯಾನಂದ್ ಅವರ ಬಾಳೆತೋಟ ಭಾರಿ ಮಳೆ ಗಾಳಿಯಿಂದಾಗಿ ನೆಲಕ್ಕಚ್ಚಿದೆ. ಅಂದಾಜು 4 ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ. ಬೈರಾಪುರದ ಚಂದ್ರಪ್ಪ, ವಿಠ್ಠಲ್ ಅವರ ಬಾಳೆ, ಅಡಿಕೆ ತೋಟಕ್ಕೂ ಹಾನಿಯಾಗಿದೆ.
→ ಕಣ್ಣೂರಿನ ಧರ್ಮಪ್ಪ ಹಾಗೂ ಗೋಪಾಳ ಎಂಬುವವರ ಬಾಳೆ ತೋಟಕ್ಕೂ ಹಾನಿಯಾಗಿದೆ. ಮಂಜಮ್ಮನವರ ಒಂದು ಎಕರೆಯಲ್ಲಿ ಬೆಳೆದ ಜೋಳ ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ಹಾನಿಯಾಗಿದೆ.ಭೈರಾಪುರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಜಮೀನುಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ಸಾಂತ್ವನ ನೀಡಿದರು.
→ ಹೊಸನಗರ ತಾಲೂಕು ಮುಂಬಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಚ ರಸ್ತೆ ನಿವಾಸಿ ಮಂಜುನಾಥ್ ಅವರ ಮನೆ, ಕೊಟ್ಟಿಗೆ ಮೇಲೆ ಮರ ಬಿದ್ದಿದೆ. ಇದರಿಂದ ಚಾವಣಿಗೆ ಹಾನಿ ಉಂಟಾಗಿದೆ. ಕೊಟ್ಟಿಗೆ ಮನೆಗೆ ಭಾಗಶಃ ಹಾನಿ ಉಂಟಾಗಿದೆ.