ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಾ.8 ಮತ್ತು 9 ರಂದು ನಗರದಲ್ಲಿ ಹರಕೆರೆ ಗ್ರಾಮದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ನಿಮತ್ತ ಜಾತ್ರೆ ನಡೆಯಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗ ಬದಲಾವಣೆ ಮಾಡಿ ಆದೇಶಿಸಲಾಗಿದೆ.
ಮಾ.8ರ ಬೆಳಗಿನ ಜಾವ 4 ರಿಂದ 9 ರ ಬೆಳಗಿನ ಜಾವದವರೆಗೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಬಂದು ಹೋಗುವ ಕಾರಣ ಹಾಗೂ ಸೂಳೆಬೈಲು ಬೆಟ್ಟದ ಮಲ್ಲೇಶ್ವರ ದೇವಾಲಯಕ್ಕೂ ಭಕ್ತಾದಿಗಳು ಆಗಮಿಸುವುದರಿಂದ ಈ ಕೆಳಗಿನಂತೆ ತಾತ್ಕಾಲಿಕವಾಗಿ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಸೂಚನೆ ಹೊರಡಿಸಿ ಆದೇಶ ನೀಡಿದ್ದಾರೆ.
READ | ಕುವೆಂಪು ವಿವಿಗೆ ಕಾಯಂ ಕುಲಪತಿ, ಎಂಟು ತಿಂಗಳ ಬಳಿಕ ವಿಸಿ ನೇಮಕ, ಯಾರಿಗೆ ಜವಾಬ್ದಾರಿ?
ಪರ್ಯಾಯ ಮಾರ್ಗದ ಮಾಹಿತಿ
- ತೀರ್ಥಹಳ್ಳಿ ಮಾರ್ಗವಾಗಿ ಓಡಾಡುವ ವಾಹನಗಳನ್ನು ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೋಗುವ ವಾಹನಗಳು ಗಜಾನನ ಗ್ಯಾರೇಜ್ ಪಕ್ಕದ ರಸ್ತೆಯಲ್ಲಿ ಹೋಗಿ ರಾಮಿನಕೊಪ್ಪ ಚಾನಲ್ ಮಾರ್ಗವಾಗಿ ಎನ್ ಎಚ್ ಆಸ್ಪತ್ರೆ ಪಕ್ಕದ ರಸ್ತೆಗೆ ಬಂದು ಸೇರುವುದು.
- ತೀರ್ಥಹಳ್ಳಿಯಿಂದ ಬರುವ ಎಲ್ಲ ವಾಹನಗಳು ಎನ್.ಎಚ್ ರಸ್ತೆಯ ಪಕ್ಕದ ರಸ್ತೆಯ ಮೂಲಕ ರಾಮಿನಕೊಪ್ಪ ಚಾನಲ್ ಕ್ರಾಸ್ ನಿಂದ ಗಜಾನನ ಗ್ಯಾರೇಜ್ ಮೂಲಕ ಬಂದು ಶಿವಮೊಗ್ಗ ಸೇರುವುದು.