ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕುವೆಂಪು ವಿಶ್ವವಿದ್ಯಾಲಯದ ಹೊಸ ಕುಲಪತಿಯಾಗಿ ಹೈದ್ರಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಫಿಸಿಕ್ಸ್ ಪ್ರಾಧ್ಯಾಪಕ ಡಾ.ಶರತ್ ಅನಂತಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.
READ | ಆರ್.ಎಂ.ಮಂಜುನಾಥ್ ಗೌಡ ಎಂಎಡಿಬಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
2023ರ ಆಗಸ್ಟ್ 1ರಂದು ಪ್ರೊ.ಬಿ.ಪಿ.ವೀರಭದ್ರಪ್ಪ ಅವರು ಕುಲಪತಿ ಸ್ಥಾನದಿಂದ ಬಿಡುಗಡೆ ಆಗಿದ್ದರು. ಕುವೆಂಪು ವಿವಿ ವಾಣಿಜ್ಯ ವಿಭಾಗದ ಹಿರಿಯ ಡೀನ್ ಪ್ರೊ.ಎಸ್.ವೆಂಕಟೇಶ್ ಅವರನ್ನು ನೇಮಕ ಮಾಡಲಾಗಿತ್ತು. ಇವರು ಮಾ.1ರಂದು ಕುಲಪತಿ ಡೀನ್ ಅವಧಿ ಮುಗಿದಿದ್ದರಿಂದ ಆ ಸ್ಥಾನಕ್ಕೆ ಪ್ರೊ.ಎಸ್.ವಿ.ಕೃಷ್ಣಮೂರ್ತಿ ಅವರನ್ನು ನೇಮಿಸಲಾಗಿತ್ತು. ಅವರು ಶನಿವಾರವಷ್ಟೇ ಅಧಿಕಾರ ಸ್ವೀಕರಿಸಿದ್ದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶರತ್ ಅನಂತಮೂರ್ತಿ ಅವರನ್ನು ನೇಮಿಸಿ ಆದೇಶಿಸಿದೆ.