Congress | ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್’ಗೆ ನೂತನ ಸಾರಥಿ, ಚುನಾವಣೆ ಹೊಸ್ತಿಲಲ್ಲಿ ಏಕೆ‌ ಇಂಥ ನಿರ್ಧಾರ?

congress 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹೊಸ್ತಿಲಲ್ಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು‌ ಬದಲಾವಣೆ ಮಾಡಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ ಆದೇಶಿಸಿದೆ.

R Prasanna kumar
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರಿಗೆ ಈ ಮಹತ್ವದ ಹುದ್ದೆಯನ್ನು ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರ ಅನುಮೋದನೆ ಮೇರೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಆದೇಶ ಹೊರಡಿಸಿದ್ದಾರೆ.

READ | ಕೊಟ್ಟಿದ್ದ ಸಾಲ ವಾಪಸ್‌ ಕೇಳಿದ್ದಕ್ಕೆ ಮರ್ಡರ್! ತಪ್ಪು ಒಪ್ಪಿಕೊಂಡ ಆರೋಪಿ

ಅಧ್ಯಕ್ಷರ ಬದಲಾವಣೆ ಏಕೆ?
ಈ‌ ಹಿಂದೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಚ್.ಎಸ್.ಸುಂದರೇಶ್ ಅವರಿಗೆ ಸೂಡಾ ಅಧ್ಯಕ್ಷ ಸ್ಥಾನ ನೀಡಿದ್ದರಿಂದ ಅಧ್ಯಕ್ಷ ಸ್ಥಾನವನ್ನು ಪ್ರಸನ್ನಕುಮಾರ್ ಗೆ ನೀಡಲಾಗಿದೆ. ಇವರು ಈ ಹಿಂದೆಯೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವ ಜವಾಬ್ದಾರಿ ಇವರ ಮೇಲಿದೆ.
ನೂತನ ಸಾರಥಿಗೆ ಯುವ ಕಾಂಗ್ರೆಸ್ ಅಭಿನಂದನೆ

R Prasanna kumar 1
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆರ್.ಪ್ರಸನ್ನ ಕುಮಾರ್ ಅವರನ್ನು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಅಭಿನಂದಿಸಲಾಯಿತು.
ಯುವ ಮುಖಂಡರಾದ ಕೆ.ರಂಗನಾಥ್, ಕೆಪಿವೈಸಿಸಿಯ ಪ್ರಧಾನ ಕಾರ್ಯದರ್ಶಿ ಎಂ. ಪ್ರವೀಣ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್‍.ಪಿ.ಗಿರೀಶ್, ಕೆಪಿವೈಸಿಸಿಯ ಕಾರ್ಯದರ್ಶಿ ಆರ್. ಕಿರಣ್, ಟಿವಿ ರಂಜಿತ್, ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಪ್ರಾಧಿಕಾರದ ಸದಸ್ಯ ಎಂ. ರಾಹುಲ್, ಶಿವಮೊಗ್ಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯ ಎಸ್.ಕುಮಾರೇಶ್, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ರಾಕೇಶ್, ಪುಷ್ಪಕ್ ಕುಮಾರ್, ಕೆ.ಎಲ್.ಪವನ್, ಮೋಹನ್ ಸೋಮಿನಕೊಪ್ಪ, ಸುಹಾಸ್ ಗೌಡ , ರಾಹುಲ್ ಸಿಗೆಹಟ್ಟಿ, ಎ.ಎಸ್. ಸಾಯಿಲ್ ಇತರರು ಇದ್ದರು.

error: Content is protected !!