Bhadra dam | ಭದ್ರಾ ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಓಪನ್, ಎಷ್ಟು ಕ್ಯೂಸೆಕ್ಸ್ ನೀರು ಬಿಡುಗಡೆ?

Bhadra Dam

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಶಿವಮೊಗ್ಗ ಜಿಲ್ಲೆಯ ಭದ್ರ ಜಲಾಶಯದಿಂದ ಮಂಗಳವಾರ ಬೆಳಗ್ಗೆ ನಾಲ್ಕು ಕ್ರಾಸ್ಟರ್ ಗೇಟ್ ಗಳ ಮೂಲಕ ನೀರು ಭದ್ರಾ ನದಿಗೆ ಬಿಡುಗಡೆ ಮಾಡಲಾಗಿದೆ.
ಭದ್ರಾ ಜಲಾಶಯದಲ್ಲಿ 30 ಸಾವಿರ ಕ್ಯೂಸೆಕ್ ನೀರು ಒಳಹರಿವಿದ್ದು ಸೋಮವಾರ ರಾತ್ರಿ 181.3 ಅಡಿ ನೀರು ಸಂಗ್ರಹವಾಗಿತ್ತು. ಇಂದು 183.3 ಕ್ಯೂಸೆಕ್ ನೀರು ಸಂಗ್ರಹವಾಗಿದ್ದರಿಂದ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ.
186 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಪರಿಣಾಮ ಜಲಾಶಯದಿಂದ ಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ.
2 ಸಾವಿರ ಕ್ಯೂಸೆಕ್ಸ್ ನೀರು ನದಿಗೆ
ಸುಮಾರು 2 ಸಾವಿರ ಕ್ಯೂಸೆಸ್ ನೀರು ನದಿ ಬಿಡಲಾಗಿದೆ. ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದ್ದು ಸುರಕ್ಷತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

READ | ಭದ್ರಾದಿಂದ ನೀರು ಹರಿಸಲು ಡೇಟ್ ಫಿಕ್ಸ್, ಅನಧಿಕೃತ ಪಂಪ್‌ಸೆಟ್ ಕಂಟ್ರೋಲ್ ಗೆ ಸೂಚನೆ

error: Content is protected !!