ಮಧ್ಯರಾತ್ರಿ ಮನೆಗೆ ಹೊಕ್ಕಿ ದರೋಡೆ ಮಾಡಿದ 10 ಜನರ ಬಂಧನ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿರಾಳಕೊಪ್ಪ: ಯಳಗೇರಿ ಗ್ರಾಮದ ವಾಸಿಯೊಬ್ಬರು ತಮ್ಮ ಮನೆಯಲ್ಲಿ ಕುಟುಂಬಸ್ಥರೊಂದಿಗೆ ಮಲಗಿದ್ದಾಗ ಮಧ್ಯರಾತ್ರಿ ದರೋಡೆ ಮಾಡಿದ 10 ಜನ ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಜುಲೈ 25ರ ಮಧ್ಯರಾತ್ರಿ ಏಕಾಏಕಿ ಮನೆಯ ಬಾಗಿಲನ್ನು ಮುರಿದು ಮನೆಯೊಳಗೆ ನುಗ್ಗಿ, ಚಾಕು ಮತ್ತು ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿದ್ದರು. ನಂತರ, ಬೆದರಿಕೆಯೊಡ್ಡಿದ ದರೋಡೆಕೋರರು ಗಾಡ್ರೇಜ್ ಬೀರುವಿನಲ್ಲಿದ್ದ ನಗದು ಹಣ, ಬಂಗಾರದ ಒಡವೆ ಮತ್ತು ಸಿಸಿ ಟಿವಿ ಕ್ಯಾಮೆರಾ ಹಾಗೂ ಡಿವಿಆರ್ ಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದರು.

ಕಾರ್ಯಾಚರಣೆ ಬಳಿಕ ಸಿಕ್ಕಿದ ತಂಡ
ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ. ಶಿಕಾರಿಪುರ ನಗರ ವೃತ್ತದ ಪಿಐ, ಶಿರಾಳಕೊಪ್ಪದ ಪಿಎಎಸ್‍ಐ ಮತ್ತು ಸಿಬ್ಬಂದಿಯ ತಂಡವು 10 ಜನ ಆರೋಪಿಗಳನ್ನು ಬಂಧಿಸಿದೆ.
ಬಂಧಿತರಿಂದ ಅಂದಾಜು ₹45,000 ಮೌಲ್ಯದ ಒಟ್ಟು 10 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರು, ಬೈಕ್ ಮತ್ತು ಓಮ್ನಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

https://www.suddikanaja.com/2021/08/16/accused-arrested-7/

error: Content is protected !!