ಶ್ವಾನದ ಬಾಯಿಗೆ ಆಹಾರವಾಗಬೇಕಿದ್ದ ಜಿಂಕೆಯ ರಕ್ಷಣೆ

 

 

ಸುದ್ದಿ ಕಣಜ.ಕಾಂ
ಸೊರಬ: ತಾಲೂಕಿನ ಕಕ್ಕರಸಿ ಗ್ರಾಮದಲ್ಲಿ ಜಿಂಕೆಯೊಂದನ್ನು ಶ್ವಾನಗಳಿಂದ ರಕ್ಷಿಸುವ ಮೂಲಕ ಸಾರ್ವಜನಿಕರು ಮಾನವಿಯತೆ ಮೆರೆದಿದ್ದಾರೆ.
ಗ್ರಾಮಸ್ಥರಾದ ಚಂದ್ರಪ್ಪ, ಸಂದೀಪ್ ಸೇರಿದಂತೆ ಇತರರು ಜಿಂಕೆಯನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಕಕ್ಕರಸಿ ಗ್ರಾಮದ ಕೆರೆ ಏರಿಯ ಮೇಲೆ ನಾಯಿಗಳ ಗುಂಪೊಂದು ಜಿಂಕೆಯನ್ನು ಅಟ್ಟಸಿಕೊಂಡು ಬಂದಿದ್ದು, ದಾಳಿ ನಡೆಸಿದೆ. ಅಲ್ಲಿಯೇ ಇದ್ದ ಗ್ರಾಮಸ್ಥರು ನಾಯಿಗಳನ್ನು ಓಡಿಸಿ ಜಿಂಕೆಯನ್ನು ರಕ್ಷಿಸಿದ್ದಾರೆ.

error: Content is protected !!