`ಸೈನ್ಸ್’ ಫೀಲ್ಡಿಗಿಳಿದ ಪಾಲಿಕೆ ಪ್ರತಿಪಕ್ಷ ನಾಯಕರು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸರ್ಕಾರ ಮತ್ತು ಮಹಾನಗರ ಪಾಲಿಕೆ ಹಸಿರು ಪಟಾಕಿಯನ್ನೇ ಕಡ್ಡಾಯವಾಗಿ ಬಳಸಬೇಕೆಂಬ ಫರ್ಮಾನು ಹೊರಡಿಸಿಯಾಗಿದೆ. ಆದರೆ, ಅದಕ್ಕೆ ಪೂರಕವಾಗಿ ಮಾರಾಟಕಾರರು, ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಪ್ರಶಿಕ್ಷಣಗೊಳಿಸುವ ಕೆಲಸ ಮಾತ್ರ ಮಾಡಿಲ್ಲ. ಇದರ ಫಲವಾಗಿಯೇ ಪಟಾಕಿ ಖರೀದಿಯಲ್ಲಿ ಭಾರಿ ಗೊಂದಲ ಉಂಟಾಗಿದೆ.
ಈ ಕಾರಣಕ್ಕಾಗಿಯೇ ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಎಚ್.ಸಿ. ಯೋಗೇಶ್ ನೇತೃತ್ವದಲ್ಲಿ ಪಾಲಿಕೆ ಸದಸ್ಯ ಆರ್.ಸಿ.ನಾಯ್ಕ, ರೇಖಾ ರಂಗನಾಥ್, ಮೇಹದ್ ಶರೀಫ್, ವಿಶ್ವನಾಥ್ ಕಾಶಿ, ನಾಗರಾಜ್, ಕೆ.ರಂಗನಾಥ್ ಸೇರಿದಂತೆ ಇತರರು ಸೈನ್ಸ್ ಮೈದಾನಕ್ಕೆ ಭೇಟಿ ನೀಡಿ ಸ್ಟಾಲ್ ಮಾಲೀಕರ ಅಹವಾಲುಗಳನ್ನು ಸೀಕರಿಸಿದರು.
ಸರ್ಕಾರದ ನೀತಿ ವಿರುದ್ಧ ಆಕ್ರೋಶ: ಸರಿಯಾಗಿ ಮಾಹಿತಿ ನೀಡದೇ ಕಡ್ಡಾಯವಾಗಿ ಹಸಿರು ಪಟಾಕಿ ಬಳಸುವಂತೆ ಸೂಚಿಸಲಾಗಿದೆ. ಇದರಿಂದ ಮಾರಾಟಗಾರರು ಮತ್ತು ಸಾರ್ವಜನಿಕರಲ್ಲಿ ಭಾರಿ ಗೊಂದಲ ಉಂಟಾಗಿದೆ. ಗಣೇಶ ಹಬ್ಬದಲ್ಲೂ ಇದೇ ರೀತಿ ಮಾಡಲಾಗಿತ್ತು ಎಂದು ಎಚ್.ಸಿ.ಯೋಗೇಶ್ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!