ಶಿವಮೊಗ್ಗದಲ್ಲಿ ಒಂದೇ ದಿನ ಎರಡು ಸಲ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ, ಇವಾಗ ಎಷ್ಟಿದೆ ದರ?

 

 

ಸುದ್ದಿ ಕಣಜ.ಕಾಂ | DISTRICT | FUEL RATE
ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಇಂಧನದ ಮೇಲೆ ಅಬಕಾರಿ ಸುಂಕ ಇಳಿಕೆ ಮಾಡಿದ್ದೇ ಶಿವಮೊಗ್ಗದಲ್ಲಿ ಏಕಾಏಕಿ ಪೆಟ್ರೋಲ್, ಡೀಸೆಲ್ ದರ ಗುರುವಾರವೊಂದೇ ದಿನ ಎರಡು ಸಲ ಇಳಿಕೆಯಾಗಿದೆ.

READ | ಶಿವಮೊಗ್ಗದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ರಾತ್ರಿ ಮತ್ತೊಮ್ಮೆ ದರ ಇಳಿಕೆಯಾಗಿದ್ದು, ಪೆಟ್ರೋಲ್ (Petrol) 102.08,ಡೀಸೆಲ್ (Diesel) 86.30, ಪವರ್ ಪೆಟ್ರೋಲ್ (Power Petrol) 105.73 ಹಾಗೂ ಟರ್ಬೋ ಜೆಟ್ (Turbojet) 89.38 ಬೆಲೆ ನಿಗದಿಯಾಗಿದೆ‌.
ಒಂದೇ ದಿನ ಬೆಲೆಯಲ್ಲಿ ಭಾರೀ ಇಳಿಕೆ
ಪೆಟ್ರೋಲ್ ಬೆಲೆಯು ಪ್ರತಿ ಲೀಟರಿಗೆ ಒಂದೇ ದಿನದಲ್ಲಿ ₹13.50 ಹಾಗೂ ಡೀಸೆಲ್ ₹19.56 ಇಳಿಕೆಯಾಗಿದೆ. ನಿರಂತರವಾಗಿ ಏರಿಕೆಯಾಗುತ್ತಿದ್ದ ಬೆಲೆ ಏಕಾಏಕಿ ಇಳಿಕೆಯಾಗಿದ್ದು ಜನರ ಮೊಗದಲ್ಲಿ ನಗೆ ಮೂಡುವಂತೆ ಮಾಡಿದೆ.

READ | ಸೆಂಟ್ರಲ್ ಜೈಲು ವಾರ್ಡನ್ ಆತ್ಮಹತ್ಯೆಗೆ ಶರಣು, ಕಾರಣವೇನು?

ರಾತ್ರಿ ಹೊತ್ತಿಗೆ ₹7.16 ಪೆಟ್ರೋಲ್ ಹಾಗೂ ₹7.03 ಇಳಿಕೆ
ಗುರುವಾರ ಬೆಳಗ್ಗೆ ಪೆಟ್ರೋಲ್ (Petrol) ₹109.24, ಡೀಸೆಲ್ (Diesel) ₹93.41,ಪವರ್ ಪೆಟ್ರೋಲ್ (Power Petrol) ₹113.13 ಹಾಗೂ ಟರ್ಬೋ ಜೆಟ್ (Turbojet) ₹96.74 ಬೆಲೆ ಇತ್ತು. ರಾತ್ರಿ ಹೊತ್ತಿಗೆ ಬೆಲೆ ಇಳಿಕೆಯಾಗಿದೆ. ಜನರಿಗೆ ಸರ್ಕಾರವು ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ.

https://www.suddikanaja.com/2021/10/18/petrol-diesel-rate-in-shivamogga/

error: Content is protected !!