ಶಿವಮೊಗ್ಗವನ್ನೇ ಬೆಚ್ಚಿ ಬೀಳಿಸಿದ್ದ ಪಲ್ಸರ್ ಗ್ಯಾಂಗ್ ಅರೆಸ್ಟ್

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಹಲವೆಡೆ ದರೋಡೆ ನಡೆಸುವ ಮೂಲಕ ಶಿವಮೊಗ್ಗವನ್ನೇ ಬೆಚ್ಚಿ ಬೀಳಿಸಿದ್ದ ಪಲ್ಸರ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಇಬ್ಬರು ಅಪರಾಧ ಹಿನ್ನೆಲೆ ಹೊಂದಿದ್ದಾರೆ.
ಶಿವಮೊಗ್ಗ, ಭದ್ರಾವತಿಯಲ್ಲಿ ನವೆಂಬರ್ 4ರಂದು ಅಡ್ರೆಸ್ ಕೇಳುವ ನೆಪದಲ್ಲಿ ಹಲವರನ್ನು ದೋಚಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋಟೆ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಾರ ಬಂಧನ, ವಶಕ್ಕೆ ಪಡೆದ ವಸ್ತುಗಳು

ಆಯನೂರು ಗೇಟ್‍ನ ಗಗನ್(19), ಬೊಮ್ಮನಕಟ್ಟೆ ಎಫ್ ಬ್ಲಾಕ್‍ನ ವಿಶಾಲ್ (19) ಹಾಗೂ ಬೊಮ್ಮನಕಟ್ಟೆ ಬಿ ಬ್ಲಾಕ್ ಪ್ರೀತಮ್(19) ಬಂಧಿತರು. ಇವರಲ್ಲಿ ವಿಶಾಲ್ ವಿರುದ್ಧ ಬೈಕ್ ಕಳ್ಳತನ ಮತ್ತು ಗಗನ್ ಮೇಲೆ ಮನೆ ಕಳ್ಳತನದ ಪ್ರಕರಣವಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಳವು ಮಾಡಿದ ಬಜಾಜ್ ಪಲ್ಸರ್ ಬೈಕ್, 10 ಮೊಬೈಲ್ ಫೆÇೀನ್, 1 ವ್ಯಾನಿಟಿ ಬ್ಯಾಗ್ ಮತ್ತು ವ್ಯಾನಿಟಿ ಬ್ಯಾಗ್ ನಲ್ಲಿದ್ದ ಬೆಳ್ಳಿಯ ಸರ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆಯಲ್ಲಿ ಬೈಕ್ ಕಳವು, ಶಿವಮೊಗ್ಗದಲ್ಲಿ ಸುಲಿಗೆ
ಗಗನ್, ವಿಶಾಲ್, ಪ್ರೀತಮ್ ಸೇರಿ ನವೆಂಬರ್ 2ರಂದು ದಾವಣಗೆರೆಯ ಸವಳಂಗದಲ್ಲಿ ಪಲ್ಸರ್ ಬೈಕ್ ವೊಂದನ್ನು ಕಳವು ಮಾಡಲಾಗಿದೆ. ಅದೇ ಬೈಕ್ ಅನ್ನು ಬಳಸಿ ಶಿವಮೊಗ್ಗದಲ್ಲಿ ಸುಲಿಗೆ ಮಾಡಲಾಗಿದೆ.
ನವೆಂಬರ್ 4ರಂದು ಬೆಳಗ್ಗೆ ಶಿವಮೊಗ್ಗ ನಗರದ ನಾಲ್ಕು ಕಡೆ ಹಾಗೂ ಭದ್ರಾವತಿ ನಗರದ ಮೂರು ಕಡೆಗಳಲ್ಲಿ ಸಾರ್ವಜನಿಕರಿಗೆ ಚಾಕು ತೋರಿಸಿ ಸುಲಿಗೆ ಮಾಡಲಾಗಿದೆ.

ವಿಳಾಸ ಕೇಳುವ ನೆಪದಲ್ಲಿ ಸುಲಿಗೆ

ಮೂವರು ಸೇರಿ ಕಳವು ಮಾಡಿಕೊಂಡು ಬಂದಿದ್ದ ಪಲ್ಸರ್ ಬೈಕಿನಲ್ಲಿ ವಿಳಾಸ, ಬೆಂಕಿ ಪೊಟ್ಟಣ ಹೀಗೆ ವಿವಿಧ ನೆಪದಲ್ಲಿ ಜನರನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಚಾಕು ತೋರಿಸಿ ಬಂಗಾರ, ಫೋನ್ ದೋಚಲಾಗಿದೆ. ಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಓದುಗರ ಗಮನಕ್ಕೆ | ಉದ್ಯೋಗ, ಶಿಕ್ಷಣ, ಕೃಷಿ, ಅಪರಾಧ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳ ಸುದ್ದಿಯ ಕಣಜ. ಈ ವೆಬ್ ಸೈಟ್. ‘ಸುದ್ದಿ ಕಣಜ.ಕಾಂ’ನ ಎಲ್ಲ ಸುದ್ದಿಗಳನ್ನು ನಿಮ್ಮ ಮೊಬೈಲ್ ನಲ್ಲಿಯೇ ಮೊದಲು ಪಡೆಯಬೇಕೆ? ಹಾಗಾದರೆ, ನಮ್ಮನ್ನು ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ. ಲಿಂಕ್ ಮೇಲೆ CLICK ಮಾಡಿ.

https://www.suddikanaja.com/2021/02/03/chain-snatching-pulsar-gang-re-active-in-shivamogga/

error: Content is protected !!