BREAKING NEWS | ಹಬ್ಬಕ್ಕಾಗಿ ಬೀಗರ ಮನೆಗೆ ಹೊರಟ ಒಂದೇ ಕುಟುಂಬದ ಮೂವರ ಸಾವು

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿರಾಳಕೊಪ್ಪ: ಹಬ್ಬಕ್ಕಾಗಿ ಬೀಗರ ಮನೆಗೆ ಊಟಕ್ಕೆಂದು ಹೊರಟ ಮೂವರು ಅಪಘಾತದಲ್ಲಿ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಎದುರುಗಡೆಯಿಂದ ಬಂದ ವಾಹನವೊಂದು ಬೈಕ್ ಡಿಕ್ಕಿ ಹೊಡೆದಿದೆ.
ಗುಂಜನೂರು ಗ್ರಾಮದ ರಾಮಚಂದ್ರಪ್ಪ(40) ಹಾಗೂ ಇಬ್ಬರೂ ಮಕ್ಕಳು ಶಶಾಂಕ್(11),ಆದರ್ಶ್(5) ಮೃತಪಟ್ಟಿದ್ದಾರೆ. ಸೊರಬ ತಾಲೂಕಿನ ಗುಂಜನೂರು ಗ್ರಾಮದಿಂದ ಮಂಗಳವಾರ ಸಂಜೆ ವಿಶೇಷ ದೀಪಾವಳಿ ಹಬ್ಬದ ಪ್ರಯುಕ್ತ ಶಿಕಾರಿಪುರ ತಾಲ್ಲೂಕಿನ ಚಿಕ್ಕಜಂಬೂರು ಗ್ರಾಮಕ್ಕೆ ಬೈಕಿನಲ್ಲಿ ಹೊರಟಿದ್ದಾಗ ಶಿರಾಳಕೊಪ್ಪ ಹಿರೇಕೆರೂರು ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ಪತ್ನಿ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
ರಾಮಚಂದ್ರಪ್ಪ ಪತ್ನಿ ಭಾಗ್ಯಮ್ಮ ಅವರು ತೀವ್ರ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!