ಪದ ಕಣಜ‌ 13 | ಕೊರೊನಾ ಟೈಂನಲ್ಲಿ ಕಾಮನ್ ಆದರೂ ‘ಕರ್ಫ್ಯೂ’ಗೆ ಇರುವ ಇತಿಹಾಸವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ | KARNATAKA | PADA KANAJA
ಭಾರತೀಯರಿಗೆ ಕರ್ಫ್ಯೂ ಪದ ಪ್ರಸಿದ್ಧವಾಗಿದ್ದು ಕೊರೊನಾ ಸಂದರ್ಭದಲ್ಲಿ. ಸೋಂಕು ಹರಡದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರ ಮುಕ್ತ ಓಡಾಡದ ಮೇಲೆ ಪ್ರತಿಬಂಧ ಹೇರುವುದಕ್ಕಾಗಿ ಈ ನೈಟ್ ಕರ್ಫ್ಯೂ, ಡೇ ಕರ್ಫ್ಯೂ ಹೇರುತ್ತಲೇ ಬಂದಿತ್ತು. ಆದರೆ, ಇದಕ್ಕೆ ಇರುವ ಇತಿಹಾಸ ತಿಳಿದುಕೊಳ್ಳಲೇಬೇಕು.

ಇದು ಆಂಗ್ಲೋ ಫ್ರೆಂಚ್ ಶಬ್ದವಾಗಿದೆ. ಇದಕ್ಕೆ ಅರ್ಥ Cover fire= ಬೆಂಕಿಯನ್ನು ಮುಚ್ಚು, ದೀಪವನ್ನು ಆರಿಸು. ಇದು ಯುದ್ಧ ಕಾಲದ ಒಂದು ಸೂಚನೆಯಾಗಿದೆ. ಒಂದು ದೊಡ್ಡ ಗಂಟೆಯ ಶಬ್ದ ಬಂದೊಡನೆಯೇ ಆಯಾ ಊರಿನ ಜನರು ಮನೆಯ ಬೆಂಕಿ ಹೊರಕ್ಕೆ ಕಾಣದಂತೆ ಮುಚ್ಚಿರಬೇಕು. ಮನೆ ಬಿಟ್ಟು ಹೊರಗಡೆ ಬರಬಾರದು.

ಇದು ಇಂಗ್ಲಿಷ್ ನವರಿಗೆ ತುಂಬಾ ಹಳೇ ಶಬ್ದ. ಅಲ್ಲಿಂದ ನಮಗೆ ಬಂದಿದೆ. ನಗರ ಪ್ರದೇಶದಲ್ಲಿ ಗಲಭೆಗಳಾದಾಗ ಈ ಕರ್ಫ್ಯೂ ವಿಧಿಸುತ್ತಾರೆ. ಆಗ ಮನೆಯ ಹೊರಗೆ ಓಡಾಡಬಾರದು ಎಂದರ್ಥ. ಈಗ ಬೆಂಕಿಗೂ ಈ ಶಬ್ದಕ್ಕೂ ಸಂಬಂಧವಿಲ್ಲ. Gray ಎಂಬ ಪ್ರಸಿದ್ಧ ಇಂಗ್ಲಿಷ್ ಕವಿ ತನ್ನದೊಂದು ಕವನದ ಮೊದಲ ಸಾಲಿನಲ್ಲಿಯೇ ಈ ಶಬ್ದವನ್ನು ಉಪಯೋಗಿಸಿದ್ದಾನೆ.
The curfew tolls the knell of parting day.

https://www.suddikanaja.com/2021/11/11/ayah-word-not-from-india-but-now-its-familiar-in-kannada/

error: Content is protected !!