Breaking news | ಪೌರ ಕಾರ್ಮಿಕನ ಮೇಲೆ ಅಟ್ಯಾಕ್ ಮಾಡಿದ್ದ ನಾಲ್ವರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | SHIVAMOGA CITY | CRIME NEWS
ಶಿವಮೊಗ್ಗ: ತ್ಯಾಜ್ಯ ಸಂಗ್ರಹಿಸುವುದಕ್ಕಾಗಿ ಹೋಗಿದ್ದಾಗ ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ ನಾಲ್ವರನ್ನು ಬಂಧಿಸಲಾಗಿದೆ. ಅದರಲ್ಲಿ ಒಬ್ಬ ಅಪ್ರಾಪ್ತನಾಗಿದ್ದಾನೆ.

follow us in link treeಜೆ.ಪಿ.ನಗರ ನಿವಾಸಿಗಳಾದ ಅಫ್ತಾಬ್(20), ಸೈಯ್ಯದ್ ಸುಬಾನ್(22), ಮುಬಾರಕ್ (20) ಬಂಧಿತರು. ಮಂಗಳವಾರದಂದು ಅಫ್ತಾಬ್ ಹಾಗೂ ಸುಬಾನಾ ಅವರಿಗೆ ಬಂಧಿಸಲಾಗಿತ್ತು. ಬುಧವಾರ ಇನ್ನಿಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಹಿನ್ನೆಲೆ

ನವೆಂಬರ್ 15ರಂದು ಟಿಪ್ಪುನಗರದ ಗೌಸಿಯಾ ಸರ್ಕಲ್ ನಿಂದ ಮುಂದೆ ತ್ಯಾಜ್ಯ ಸಂಗ್ರಹಿಸುವುದಕ್ಕಾಗಿ ವಾಹನದಲ್ಲಿ ಹೋದಾಗ ಪೌರ ಕಾರ್ಮಿಕ ದೇವರಾಜ್ ಅವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಲಾಗಿತ್ತು.
ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡುವಂತೆ ದೇವರಾಜ್ ಅವರು ತಿಳಿಸಿದ್ದಾರೆ. ಇದೇ ಕಾರಣಕ್ಕಾಗಿ ಗುಂಪೊಂದು ಅವಾಚ್ಯವಾಗಿ ಬೈಯ್ದು ಹಲ್ಲೆ ಮಾಡಿದ್ದಾರೆ. ಬಿಡಿಸಲು ಬಂದಿದ್ದ ವಾಹನ ಚಾಲಕ ಮಂಜುನಾಥ್ ಅವರ ಮೇಲೆಯೂ ಹಲ್ಲೆ ಮಾಡಲಾಗಿತ್ತು. ಹಲ್ಲೆ ಮಾಡಿದ್ದಕ್ಕೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 143, 504, 323, 324, 506 353,149 ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

https://www.suddikanaja.com/2021/03/09/labor-dead-in-sorab/

error: Content is protected !!