ಸುದ್ದಿ ಕಣಜ.ಕಾಂ | TALUK | CYBER CRIME
ಶಿವಮೊಗ್ಗ: ಭದ್ರಾವತಿಯ ಹುತ್ತಾ ಕಾಲೊನಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಹಣವನ್ನು ಡ್ರಾ ಮಾಡಲಾಗಿದೆ.
79,993 ರೂಪಾಯಿಯನ್ನು ಡ್ರಾ ಮಾಡಲಾಗಿದ್ದು, ಶಿವಮೊಗ್ಗದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
READ | ಡ್ರಾ ಮಾಡದಿದ್ದರೂ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ಹಣ ಮಂಗಮಾಯ!
ಹೇಗೆ ಮಾಡಲಾಯಿತು ಮೋಸ?
ಬ್ಯಾಂಕಿನ ಎಂ.ಡಿ. ಎಂದು ಹೇಳಿ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ಬ್ಯಾಂಕಿನ ವೈಯಕ್ತಿಕ ಮಾಹಿತಿಗಳನ್ನು ನೀಡಿದ್ದಾರೆ. ಒಂದುವೇಳೆ, ಮಾಹಿತಿ ನೀಡದಿದ್ದರೆ ಖಾತೆ ಮತ್ತು ಡೆಬಿಟ್ ಕಾರ್ಡ್ ರಿನಿವಲ್ ಮಾಡಲಾಗುವುದಿಲ್ಲ. ಇದರಿಂದ ತೊಂದರೆ ಆಗಬಹುದು ಎಂದು ಎಚ್ಚರಿಸಿದ್ದಾರೆ. ನಂತರ, ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಎಟಿಎಂ ಹಿಂದಿರುವ ಡಿಜಿಟ್ ಕೇಳಿದ್ದಾನೆ. ಅದನ್ನು ನೀಡಿದ್ದು, ಹಣವನ್ನು ಡ್ರಾ ಮಾಡಲಾಗಿದೆ.