ಮದುವೆ ಊಟ ಸೇವಿಸಿ 160ಕ್ಕೂ ಜನ ಅಸ್ವಸ್ಥ, ಜಿಲ್ಲೆಯಲ್ಲಿ ನಾಲ್ಕನೇ ಪ್ರಕರಣ

 

 

ಸುದ್ದಿ ಕಣಜ.ಕಾಂ | TALUK | HEALTH 
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಬಳಿಯ ನಾಗತಿಬೆಳಗಲು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಊಟ ಮಾಡಿದ 160 ಮಂದಿ ಅಸ್ವಸ್ಥರಾಗಿದ್ದಾರೆ. ಅವರನ್ನು ಹೊಳೆಹೊನ್ನೂರು ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

follow us in link treeಅರೆದೊಟ್ಲು ಗ್ರಾಮದ ಯುವಕ, ಬ್ಯಾಡಗಿಯ ಯುವತಿಯ ವಿವಾಹ ನಡೆದಿದ್ದು, ಮುಹೂರ್ತದ ಊಟ ಮಾಡಿದ ಬಹುತೇಕರಲ್ಲಿ ರಾತ್ರಿಯೇ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬೆಳಗ್ಗೆ ವಾಂತಿ, ಭೇದಿ, ಹೊಟ್ಟೆ ನೋವು, ಜ್ವರ ಶುರುವಾಗಿದೆ.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. 65 ಜನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದು, ಇನ್ನುಳಿದವರು ಶಿವಮೊಗ್ಗ, ಭದ್ರಾವತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಧುವಿನ ಕಡೆಯವರೂ ಅಸ್ವಸ್ಥ

ಮದುವೆ ಕಾರ್ಯಕ್ರಮ ಮುಗಿದ ಬಳಿಕ ವಧುವಿನ ಕಡೆಯವರು ವಾಪಸ್ ಬ್ಯಾಡಗಿಗೆ ಹೋಗಿದ್ದಾರೆ. ಅದರಲ್ಲಿ 15 ಜನರು ಅಸ್ವಸ್ಥರಾಗಿದ್ದಾರೆ. ಅವರನ್ನು ಹಾವೇರಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

https://www.suddikanaja.com/2021/11/12/above-100-people-admitted-in-hospital-after-having-food-in-marriage-reception/

error: Content is protected !!