ಶಿವಮೊಗ್ಗದಲ್ಲಿ ಸುರಿಯುತ್ತಿರುವ ಮಳೆಗೆ 130 ಹೆಕ್ಟೆರ್ ಬೆಳೆ ನಾಶ, 37 ಮನೆಗಳಿಗೆ ಹಾನಿ, ಎಲ್ಲಿ ಏನೇನು ಅನಾಹುತವಾಗಿದೆ?

 

 

ಸುದ್ದಿ ಕಣಜ.ಕಾಂ | DISTRICT | RAIN FALL
ಶಿವಮೊಗ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ಕಳೆದ 2-3 ದಿನಗಳಿಂದ ಜಿಟಿ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ 130 ಹೆಕ್ಟೆರ್ ಬೆಳೆ ಹಾಗೂ 37 ಮನೆಗಳು ಹಾನಿಯಾಗಿವೆ.
ಭದ್ರಾವತಿ, ಶಿವಮೊಗ್ಗದಲ್ಲಿ ತಲಾ ಎರಡು ಕಚ್ಚಾ ಹಾನಿಗೀಡಾಗಿವೆ. ಕಳೆದ 15 ದಿನಗಳಲ್ಲಿ 34 ಮನೆಗಳು ಸಂಪೂರ್ಣ, 3 ಮನೆಗಳು ಭಾಗಶಃ ಹಾನಿಗೀಡಾಗಿವೆ. 5 ಜಾನುವಾರು ಮೃತಪಟ್ಟಿವೆ.

follow us in link tree

ಯಾವ ತಾಲೂಕಿನಲ್ಲಿ ಎಷ್ಟು ಬೆಳೆ ಹಾನಿ

102 ಹೆಕ್ಟೆರ್ ಭತ್ತ, 11 ಹೆಕ್ಟೆರ್ ಮೆಕ್ಕೆ ಜೋಳ, 3 ಹೆಕ್ಟೆರ್ ರಾಗಿ ಸೇರಿ ಒಟ್ಟು 115 ಹೆಕ್ಟೆರ್ ಕೃಷಿ ಬೆಳೆ, 15 ಹೆಕ್ಟೆರ್ ತೋಟದ ಬೆಳೆ ಹಾನಿಯಾಗಿದೆ. ಹವಾಮಾನ ಇಲಾಖೆ ಇನ್ನೂ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿರುವುದರಿಂದ ರೈತರು ಭೀತಿಯಲ್ಲಿದ್ದಾರೆ. ಮೆಕ್ಕೆ ಜೋಳ ಕೊಯ್ಲು ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಮಾಡಿದ್ದು ಒಣಗಿಸಲಾಗುತ್ತಿಲ್ಲ.
ಶೇ.338ರಷ್ಟು ಅಧಿಕ ಮಳೆ
ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ 5.7 ಎಂಎಂ ಮಳೆ ಸುರಿದಿದ್ದು, ಶೇ.338ರಷ್ಟು ಅಧಿಕ ಮಳೆ ದಾಖಲಾಗಿದೆ.

https://www.suddikanaja.com/2021/08/09/meeting-on-flood-releaf/

error: Content is protected !!