ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಇದುವರೆಗೆ ಜಿಲ್ಲೆಯಲ್ಲಿ 5 ಅಭ್ಯರ್ಥಿಗಳು ಒಟ್ಟು 10 ನಾಮಪತ್ರ ಸಲ್ಲಿಸಿದ್ದಾರೆ.
ಈಗಾಗಲೇ ಆರ್.ಪ್ರಸನ್ನಕುಮಾರ್ ಅವರು ವಿಧಾನ ಪರಿಷತ್ತು ಸದಸ್ಯರಾಗಿದ್ದು, ಈಗಾಗಲೇ ನಾಮಪತ್ರವನ್ನೂ ಸಲ್ಲಿಸಿದ್ದಾರೆ. ಇನ್ನೊಂದೆಡೆ ಅರುಣ್ ಅವರ ಹೆಸರು ಘೋಷಣೆಗೂ ಮುನ್ನವೇ ಜಿಲ್ಲಾ ಬಿಜೆಪಿಯಿಂದ ಜನಸ್ವರಾಜ್ ಸಮಾವೇಶ ಆಯೋಜಿಸಿ ತಮ್ಮ ಬಲವನ್ನೂ ಬಿಜೆಪಿ ತೋರಿಸಿದೆ. ಈಗಾಗಲೇ ಚುನಾವಣೆ ಕಣ ರಂಗೇರಿದ್ದು, ಸ್ಥಳೀಯ ಸಂಸ್ಥೆಯಲ್ಲಿ ತಮ್ಮ ಬಲಾಬಲವನ್ನು ಪಕ್ಷಗಳು ಸಾಬೀತು ಪಡಿಸುತ್ತಿವೆ.
ಇದುವರೆಗೆ ಸಲ್ಲಿಕೆಯಾದ ನಾಮಪತ್ರಗಳು
- ಆರ್. ಪ್ರಸನ್ನ ಕುಮಾರ್ (ಕಾಂಗ್ರೆಸ್) 3
- ವೈ.ಎಚ್.ನಾಗರಾಜ್ (ಪಕ್ಷೇತರ) 3
- ಡಿ.ಎಸ್.ಅರುಣ್ (ಬಿಜೆಪಿ) 2
- ಆರ್.ಎಸ್. ಭುಜಂಗ (ಪಕ್ಷೇತರ) 1
- ಬಿ.ಕೆ. ಶಶಿಕುಮಾರ್ (ಜೆಡಿಯು) 1