ಭಾರತ-ಆಸ್ಟ್ರೇಲಿಯ ಸರಣಿ: ಕ್ವಾರಂಟೈನ್’ನಲ್ಲೇ ಅಭ್ಯಾಸ ಆರಂಭಿಸಿದ ಕೊಹ್ಲಿ ಪಡೆ, ಟ್ವೀಟ್‌ಗೆ ಫ್ಯಾನ್ಸ್ ಫಿದಾ

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ಭಾರತ ಮತ್ತು ಆಸ್ಟ್ರೇಲಿಯ ಮಧ್ಯೆ ಇದೇ ತಿಂಗಳ 27ರಿಂದ ಸರಣಿ ಆರಂಭವಾಗಲಿದೆ. ಸದ್ಯ ಕ್ವಾರಂಟೈನ್’ನಲ್ಲಿರುವ ಕೊಹ್ಲಿ ಪಡೆ ತಾಲೀಮಿನಲ್ಲಿ ತಲ್ಲೀನವಾಗಿದೆ. ಇದನ್ನು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊAಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ನವೆಂಬರ್ 12ರಂದು ಯುಎಇಯಿಂದ ಐಪಿಎಲ್ ಮುಗಿಸಿ ಸಿಗ್ನಿಗೆ ಬಂದಿಳಿದ 25 ಜನರ ತಂಡ ಸಿಡ್ನಿಯ ಹೊರವಲಯದಲ್ಲಿರುವ ವಿಶೇಷ ಸ್ಪೋರ್ಟ್ಸ್ ಪಾರ್ಕ್’ನಲ್ಲಿ ತಂಗಿದೆ. ಆದರೆ, ಈ ಅವಧಿಯಲ್ಲೂ ನಿರಂತರ ಅಭ್ಯಾಸ ಮಾಡಲಾಗುತ್ತಿದೆ.
ಕೋವಿಡ್ ಹಿನ್ನೆಲೆ ಕೊಹ್ಲಿ ಪಡೆ 14 ದಿನಗಳ ಕ್ವಾರಂಟೈನ್’ನಲ್ಲಿ ಇರಬೇಕು. ಇದಕ್ಕೋಸ್ಕರ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ಇಲ್ಲಿ ತಂಗಿರುವ ಭಾರತ ತಂಡಕ್ಕೆ ಐಷಾರಾಮಿ ವ್ಯವಸ್ಥೆ ಮಾಡಿದೆ. ಎಲ್ಲ ಆಟಗಾರರಿಗೆ ನೆಟ್ಸ್’ನಲ್ಲಿ ಅಭ್ಯಾಸ ನಡೆಸಲು ಕೂಡ ವಿಶೇಷ ಸೌಲಭ್ಯ ಕಲ್ಪಿಸಿದೆ.
ನಾಯಕ ವಿರಾಟ್ ಕೊಹ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ನೆಟ್ಸ್’ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳ ಉತ್ಸಾಹ ಇಮ್ಮಡಿಗೊಳಿಸಿದೆ.
ಈ ಪ್ರವಾಸದಲ್ಲಿ ಭಾರತ 3 ಏಕ ದಿನ ಪಂದ್ಯ, 3 ಟಿ-20, 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಸಿಡ್ನಿಯಲ್ಲಿ ಪಂದ್ಯ ಆರಂಭವಾಗಲಿದೆ. ಅದಕ್ಕಾಗಿ, ಅಭಿಮಾನಿಗಳು ಕಾತುರದಲ್ಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!