ಜೋಗ ಜಲಪಾತದ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲ‌ ಗೆಲ್ಹೋಟ್, ಶಿವಮೊಗ್ಗ ಬಗ್ಗೆ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ‌ | DISTRICT | POLITICAL NEWS
ಶಿವಮೊಗ್ಗ: ವಿಶ್ವವಿಖ್ಯಾತ ಜೋಗಕ್ಕೆ ಯಾರೇ ಭೇಟಿ ನೀಡಿದರೂ ಅಚ್ಚರಿಯೊಂದಿಗೆ ಜಲಪಾತಗಳ ಬಗ್ಗೆ ಮಾಹಿತಿ ಪಡೆಯುವುದು ಸಾಮಾನ್ಯ. ರಾಜ್ಯಪಾಲರು ಸಹ ಅದನ್ನೇ ಮಾಡಿದರು.
ದೇಶದ ಅತಿ ಎತ್ತರದ ಜೋಗ ಜಲಪಾತ ಮತ್ತು ಸುತ್ತಮುತ್ತಲಿನ ನಿಸರ್ಗದ ಸೌಂದರ್ಯವನ್ನು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ವೀಕ್ಷಿಸಿ ಸಂತಸಪಟ್ಟರು.

READ | ಹೊಳೆಹೊನ್ನೂರು-ಶಿವಮೊಗ್ಗ ರಸ್ತೆ ಸರಿಯಿಲ್ಲದ್ದಕ್ಕೆ ಮಾರ್ಗವನ್ನೇ ಬದಲಿಸಿದ ರಾಜ್ಯಪಾಲ ಗೆಹ್ಲೋಟ್! ಅಧಿಕಾರ ನಡೆ ಚರ್ಚೆಗೆ ಗ್ರಾಸ

ಜೋಗದಲ್ಲಿ ವಾಸ್ತವ್ಯ ಹೂಡಿದ ಅವರು, ಮುಂಜಾನೆಯೇ ಜೋಗದ ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಹೆಸರಿನ ಜಲಧಾರೆಗಳ ಮಾಹಿತಿಯನ್ನು ಪಡೆದರು.
ನಂತರ ದಟ್ಟವಾದ ಕಾಡು ಮತ್ತು ಗುಡ್ಡಗಳ ನಡುವಲ್ಲಿ ಶರಾವತಿ ನದಿಯು ಹರಿದು ಅತಿ ಎತ್ತರದಿಂದ ಭೋರ್ಗರೆಯುತ್ತಾ ನಾಲ್ಕು ಸೀಳಾಗಿ ಧುಮುಕುತ್ತಿರುವ ವೈಭವದ ದೃಶ್ಯವನ್ನು ಕಣ್ತುಂಬಿಕೊಂಡರು.
ಉತ್ತರ ಕನ್ನಡ ಡಿಸಿ ಮುಲ್ಲೈ ಮುಹಿಲನ್, ಎಸ್ ಪಿ ಡಾ.ಸುಮನ್ ಡಿ. ಪೆನ್ನೇಕರ್, ಕುಮ್ಟ ಎಸಿ ರಾಹುಲ್ ಪಾಂಡೆ ಉಪಸ್ಥಿತರಿದ್ದರು.

jog falls Governor
ಜೋಗ ಜಲಪಾತಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್.

READ | ಶಿವಮೊಗ್ಗ: ಎಸಿಬಿ ದಾಳಿಯಲ್ಲಿ ಸಿಲುಕಿದ ಕೋಟಿ ಒಡೆಯ ಕೃಷಿ ಅಧಿಕಾರಿಗೆ ನ್ಯಾಯಾಂಗ ಬಂಧನ

ಹುಲಿ, ಸಿಂಹ ಧಾಮಕ್ಕೆ ಭೇಟಿ
ಗೆಹ್ಲೊಟ್ ಅವರು ಶಿವಮೊಗ್ಗದ ತಾವರೆಕೊಪ್ಪದಲ್ಲಿರುವ ಸಿಂಹ ಮತ್ತು ಹುಲಿ ಧಾಮಕ್ಕೆ ಭೇಟಿ ನೀಡಿ, ವಿವಿಧ ವನ್ಯಪ್ರಾಣಿಗಳನ್ನು ವೀಕ್ಷಿಸಿದರು.
ಕರ್ನಾಟಕ ಸಮೃದ್ಧ ಹಾಗೂ ಸಂಪದ್ಭರಿತ ನಾಡಾಗಿದೆ. ಭಾರತದಲ್ಲಿ ಕರ್ನಾಟಕ ಜನಪ್ರಿಯ ಪ್ರವಾಸೋದ್ಯಮ ತಾಣವಾಗಿದೆ. ಕರ್ನಾಟಕ ರಾಜ್ಯವು ನೈಸರ್ಗಿಕ ಸೌಂದರ್ಯವನ್ನು ಹೊಂದಿರುವ ಸುಂದರ ಪ್ರವಾಸಿ ತಾಣವಾಗಿದೆ. ಕರ್ನಾಟಕದ ಪ್ರವಾಸ ಸ್ಥಳಕ್ಕೆ ಭೇಟಿ ನೀಡಿ, ಪ್ರವಾಸೋದ್ಯಮ ಪ್ರೋತ್ಸಾಹಿಸಲು ಕೈಜೋಡಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ‌ ಮಾಡಿದರು.
ಶಿವಮೊಗ್ಗ ಜಿಲ್ಲೆಯಂತೂ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗವಾಗಿದೆ. ಪ್ರಕೃತಿ ಸೌಂದರ್ಯ ಮನಸೂರೆಗೊಂಡಿದೆ ಎಂದು ಮುಕ್ತಕಂಠದಿಂದ ಕೊಂಡಾಡಿದರು. ಇದ್ದ ಎರಡು‌ ದಿನ ಶಿವಮೊಗ್ಗದ ನಾನಾ ಕಡೆಗಳಲ್ಲಿ ಭೇಟಿ‌ ನೀಡಿದ್ದು ವಿಶೇಷವಾಗಿತ್ತು.

https://www.suddikanaja.com/2021/08/01/special-package-for-tourist-to-shivamogga/

error: Content is protected !!