ಕಲ್ಯಾಣ ಕರ್ನಾಟಕ ದಲ್ಲಿ ಖಾಲಿ ಹುದ್ದೆಗಳ ಭರ್ತಿ ಗ್ರೀನ್ ಸಿಗ್ನಲ್, ಯಾವ ಹುದ್ದೆಗಳ ನೇಮಕಾತಿ?

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕಲ್ಯಾಣ ಕರ್ನಾಟಕದಲ್ಲಿ‌ ಖಾಲಿ ಇರುವ ವಿವಿಧ ಹುದ್ದೆಗಳ‌ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಉದ್ಯೋಗ ಆಕಾಂಕ್ಷಿಗಳ‌ ಪಾಲಿಗೆ ಇದು ಉತ್ತಮ‌ ಅವಕಾಶವಾಗಲಿದೆ.

READ | NFLನಲ್ಲಿ ಖಾಲಿ ಹುದ್ದೆಗಳ ಭರ್ತಿ, ಪದವೀಧರರಿಗೆ ಸುವರ್ಣ ಅವಕಾಶ

ಕಲ್ಯಾಣ ಕರ್ನಾಟಕ ಭಾಗದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಹಾಗೂ ಬ್ಯಾಕ್‌ ಲಾಗ್‌ ಹುದ್ದೆ ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಕೋವಿಡ್ ನಿಂದಾಗಿ ನೇಮಕಾತಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಹುದ್ದೆಗಳು ಖಾಲಿ ಇರುವುದರಿಂದ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೂಡಲೇ ಹೊಸ ಹುದ್ದೆಗಳ ಸೃಷ್ಟಿ, ನೇರ ನೇಮಕಕ್ಕೆ ಹೇರಲಾಗಿದ್ದ ತಡೆಯನ್ನು ತೆರವುಗೊಳಿಸುವಂತೆ ಇತ್ತೀಚೆಗೆ‌ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಭರ್ತಿಗೆ ಕ್ರಮ ವಹಿಸಲು ಆದೇಶಿಸಲಾಗಿದೆ. ಆರ್ಥಿಕ‌‌ ಇಲಾಖೆಯ ಒಪ್ಪಿಗೆ ಸಿಗಬೇಕಿದೆ.
ಯಾವ ಯಾವ ಹುದ್ದೆಗಳು‌ ಖಾಲಿ
ಶೀಘ್ರ ಲಿಪಿಗಾರರು, ಬೆರಳಚ್ಚುಗಾರ, ವಾಹನ ಚಾಲಕರು ಮತ್ತು ಗ್ರೂಪ್‌ ಡಿ ವೃಂದಗಳ ಹುದ್ದೆಗಳನ್ನು ಅನುದಾನದ ಲಭ್ಯತೆ ಒಳಪಟ್ಟು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಸೂಚಿಸಲಾಗಿದೆ.

https://www.suddikanaja.com/2021/09/28/job-recruitment-in-karnataka-for-3006-posts/

error: Content is protected !!