ದನಗಳ್ಳರ ತಡೆಯಲು ಹೋದ ಯುವಕರ ಮೇಲೆಯೇ ವಾಹನ ಹತ್ತಿಸಿದ ಖದೀಮರು, ಆತಂಕ ಸೃಷ್ಟಿಸಿದ ಘಟನೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ತೀರ್ಥಹಳ್ಳಿ: ದನಗಳ್ಳರನ್ನು ತಡೆಯಲು ಹೋದ ಯುವಕರ ಮೇಲೆಯೇ ಪಿಕ್ ಅಪ್ ವ್ಯಾನ್ ಹಾತ್ತಿಸಿದ ಘಟನೆ ತಾಲೂಕಿನ ಬೆಜ್ಜವಳ್ಳಿಯಲ್ಲಿ ಮಂಗಳವಾರ ಸಂಭವಿಸಿದೆ.
ಸಹೋದರರಾದ ಕಿರಣ್(23) ಮತ್ತು ಚರಣ್(24) ಎಂಬುವವರ ಮೇಲೆ ವಾಹನ ಹತ್ತಿಸಿದ್ದು, ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಏಕಾಏಕಿ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು, ಆಸ್ಪತ್ರೆ ಮುಂದೆ ಭಾರಿ ಸಂಖ್ಯೆಯಲ್ಲಿ ಜನ ನೆರೆದಿದ್ದರು.

ಎಲ್ಲಿಂದ ಸಾಗಿಸಲಾಗುತಿತ್ತು?

ದನಗಳನ್ನು ತಾಲೂಕಿನ ಮೇಳಿಗೆಯಿಂದ ಅಕ್ರಮವಾಗಿ ಸಾಗಿಸಲಾಗುತಿತ್ತು. ಆಗ ತಡೆಯಲು ಯತ್ನಿಸಿದಾಗ ವಾಹನವನ್ನು ಅವರ ಮೇಲೆಯೇ ಹತ್ತಿಸಲಾಗಿದೆ. ದನಗಳ್ಳರು ಕುಡುಮಲ್ಲಿಗೆ ರೈಸ್ ಮಿಲ್ ಬಳಿಯೂ ಕೆಲವರ ಮೇಲೆ ವಾಹನ ಹತ್ತಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿರುದ್ಧ ಭಜರಂಗ ದಳ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

https://www.suddikanaja.com/2021/04/04/elephant-attack-on-doctor-at-sakrebailu-elephant-camp/

error: Content is protected !!