ಸುದ್ದಿ ಕಣಜ.ಕಾಂ | TALUK | RAILWAY NEWS
ಶಿವಮೊಗ್ಗ: ರೈಲ್ವೆ ಕ್ರಾಸಿಂಗ್ ನಲ್ಲಿ ತಾಂತ್ರಿಕ ಪರಿಶೀಲನೆ ಮಾಡಲಾಗುತ್ತಿದೆ. ಹೀಗಾಗಿ, ಈ ಕೆಳಕಂಡ ಮಾರ್ಗಗಳಲ್ಲಿ ಸಂಚರಿಸುವವರು ನಿಗದಿಪಡಿಸಿದ ದಿನಾಂಕಗಳಂದು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗ- ಕುಂಸಿ ರೈಲ್ವೆ ನಿಲ್ದಾಣಗಳ ನಡುವೆ ಬರುವ ರೈಲ್ವೆ ಕ್ರಾಸಿಂಗ್ ಗೇಟ್ ನಂ.49 ಕಿ.ಮೀ. ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ ನಂ. 50 ಕಿ.ಮೀ. ಹಾಗೂ ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 79 ಕಿ.ಮೀ. ಗಳಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಗೇಟ್ಗಳನ್ನು ಮುಚ್ಚಲು ಉದ್ದೇಶಿಸಲಾಗಿದೆ.
ಯಾವ ಮಾರ್ಗಗಳಲ್ಲಿ ಎಂದು ಸಂಚಾರ ನಿರ್ಬಂಧ
- ಎಲ್.ಸಿ. ಗೇಟ್ ನಂ.49ರಲ್ಲಿ ಡಿಸೆಂಬರ್ 3ರ ರಾತ್ರಿ 10.30ರಿಂದ ಡಿಸೆಂಬರ್ 4ರ ರಾತ್ರಿ 7 ಗಂಟೆಯವರೆಗೆ ಪರಿಶೀಲನೆ ನಡೆಯಲಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳ ಸವಾರರು ಎಲ್.ಸಿ.ಗೇಟ್ 50ರ ಬೊಮ್ಮನಕಟ್ಟೆ ಮತ್ತು ಎಲ್.ಸಿ.ಗೇಟ್ 52ರ ಕಾಶೀಪುರದ ಮೂಲಕ ಉಷಾ ನರ್ಸಿಂಗ್ ಹೋಂ-ಜೈಲ್ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮುಖಾಂತರ ಹಾಗೂ ನವುಲೆ-ರಾಗಿಗುಡ್ಡ-ಹೊನ್ನಾಳಿ ರಸ್ತೆ-ಫ್ಲೈಓವರ್ ಮುಖಾತರ ಸಂಚರಿಸುವಂತೆ ಸೂಚಿಸಿದ್ದಾರೆ.
- ಎಲ್.ಸಿ.ಗೇಟ್ 50ರಲ್ಲಿ ಡಿಸೆಂಬರ್ 6ರಂದು ರಾತ್ರಿ 10.30ರಿಂದ ಡಿಸೆಂಬರ್ 7ರ ರಾತ್ರಿ 7ಗಂಟೆಯವರೆಗೆ ಪರಿಶೀಲನೆ ನಡೆಯಲಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳ ಸವಾರರು ಎಲ್.ಸಿ.ಗೇಟ್ 52ರ ಕಾಶೀಪುರ ಮತ್ತು ಎಲ್.ಸಿ.ಗೇಟ್ ನಂ.49ರ ಸವಳಂಗ ಮಾರ್ಗದ ಮೂಲಕ ಉಷಾ ನರ್ಸಿಂಗ್ ಹೋಮ್- ಜೈಲ್ ಸರ್ಕಲ್, ವಿನೋಬನಗರ- ಪೊಲೀಸ್ ಚೌಕಿ ಮುಖಾಂತರ
- ಎಲ್.ಸಿ.ಗೇಟ್ 79ರಲ್ಲಿ ಡಿಸೆಂಬರ್ 9ರಂದು ರಾತ್ರಿ 10.30 ರಿಂದ ಡಿಸೆಂಬರ್ 10ರ ರಾತ್ರಿ 7ಗಂಟೆಯವರೆಗೆ ಪರಿಶೀಲನೆ ನಡೆಯಲಿದೆ. ಈ ಭಾಗದಲ್ಲಿ ಸಂಚರಿಸುವ ವಾಹನಗಳ ಸವಾರರು ಚೋರಡಿ-ಶೆಟ್ಟಿಕೊಪ್ಪ-ಸೂಡೂರು 5ನೇ ಮೈಲಿಕಲ್ಲು-ಆಯನೂರು ಮತ್ತು ಎಲ್.ಸಿ.ಗೇಟ್ 73ರ ಮಾರ್ಗವಾದ ಬಾಲೆಕೊಪ್ಪ-ಚಿಕ್ಕಮರಸ ಮುಖಾಂತರ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
https://www.suddikanaja.com/2021/09/12/shivamogga-airoplane-five-routs-final-to-fly/