ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಜಾಮೀನು ಅರ್ಜಿ ವಜಾ

 

 

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಆದಾಯ ಮೀರಿ ಶೇ.400ರಷ್ಟು ಆಸ್ತಿ ಹೊಂದಿರುವ ಗದಗ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಅವರ ಜಾಮೀನು ಅರ್ಜಿಯನ್ನು ಶಿವಮೊಗ್ಗದ ಒಂದನೇ ಹೆಚ್ಚುವರಿ ಮತ್ತು ಸೆಷನ್ ನ್ಯಾಯಾಲಯ ವಜಾಗೊಳಿಸಿದೆ.

CLICK BELOW FOR VIDEO REPORT

ಅಕ್ರಮ ಆಸ್ತಿ ಗಳಿಕೆ ಮಾಡಿರುವ ಆರೋಪದ ಮೇಲೆ ರುದ್ರೇಶಪ್ಪ ಅವರ ಚಾಲುಕ್ಯನಗರ, ಗೋಪಾಳಗೌಡ ಬಡಾವಣೆಯಲ್ಲಿರುವ ಎರಡು ಮನೆಗಳ ಮೇಲೆ ನವೆಂಬರ್ 24ರಂದು ದಾಳಿ ಮಾಡಲಾಗಿತ್ತು. ನಂತರ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರುದ್ರೇಶಪ್ಪ ಅವರು ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ವಜಾ ಮಾಡಿದೆ.
ಸಿಕ್ಕಿತ್ತು 9.50 ಕೆಜಿ ಚಿನ್ನಾಭರಣ, ಲಕ್ಷಾಂತರ ಹಣ
ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡುವಾಗ ಮನೆಯಲ್ಲಿ 9.50 ಕೆಜಿ ಚಿನ್ನಾಭರಣ ಲಭಿಸಿದ್ದವು. 100 ಗ್ರಾಂನ 60 ಚಿನ್ನದ ಬಿಸ್ಕೆಟ್, 50 ಗ್ರಾಂನ 8 ಚಿನ್ನದ ಬಿಸ್ಕೆಟ್, ಇತರೆ ಚಿನ್ನಾಭರಣ ಸಿಕ್ಕಿತ್ತು. ಜೊತೆಗೆ, ವಜ್ರದ ಹಾರಗಳು, 3 ಕೆಜಿ ಬೆಳ್ಳಿ, 15 ಲಕ್ಷ ರೂಪಾಯಿ ನಗದು ಸಿಕ್ಕಿತ್ತು.

https://www.suddikanaja.com/2021/11/25/shivamogga-court-order-for-judicial-custody-to-agricultural-officer-who-was-raid-by-acb/

error: Content is protected !!