BMRCL JOB, ಡಿಪ್ಲೋಮಾ‌ ಪಾಸಾದವರಿಗೆ ಇಲ್ಲಿದೆ ಉದ್ಯೋಗ ಅವಕಾಶ, ಕೂಡಲೇ ಅರ್ಜಿ ಸಲ್ಲಿಸಿ

 

 

ಸುದ್ದಿ‌ ಕಣಜ.ಕಾಂ‌ | KARNATAKA | JOB JUNCTION
ಬೆಂಗಳೂರು: ಡಿಪ್ಲೋಮಾ‌ ಉತ್ತೀರ್ಣರಾದ‌ ಅಥವಾ ಮಿಲಿಟರಿ ಪಡೆ ನೀಡಿದ ತತ್ಸಮಾನ ವಿದ್ಯಾರ್ಹತೆಯಲ್ಲಿ ಮೊದಲ ಗ್ರೇಡ್‌ ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶವಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL)  ಅಧಿಸೂಚನೆ ಹೊರಡಿಸಿದ್ದು, ಸ್ಟೇಷನ್‌ ಕಂಟ್ರೋಲರ್ (STATION CONTROLLER) ಮತ್ತು ಟ್ರೈನ್‌ ಆಪರೇಟರ್ (TRAIN OPERATOR) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಒಟ್ಟು 50 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

READ | ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ,‌ ಡಿಗ್ರಿ ಪಾಸ್ ಆದವರಿಗೆ ಉದ್ಯೋಗ, ಮಾಹಿತಿಗಾಗಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಡಿಸೆಂಬರ್ 12ರಿಂದ ಆರಂಭಗೊಂಡಿದ್ದು, ಆನ್ಲೈನ್ ನಲ್ಲಿ ಅರ್ಜಿ‌ ಸಲ್ಲಿಸಲು 2022ರ ಜನವರಿ 10 ಅಂತಿಮ ದಿನವಾಗಿದೆ. ಹಾಗೂ ಜನವರಿ 14ರೊಳಗೆ ಅರ್ಜಿಯ ಮುದ್ರಿತ ಪ್ರತಿ (print copy) ಯನ್ನು ಕಳುಹಿಸಬೇಕು.
ಅರ್ಜಿ ಭರ್ತಿ ಮಾಡಿದ ಬಳಿಕ ಅಭ್ಯರ್ಥಿಗಳು ಮುದ್ರಿತ ಪ್ರತಿಯನ್ನು “ದ ಜನರಲ್ ಮ್ಯಾನೇಜರ್ (ಎಚ್.ಆರ್.), ಬೆಂಗಳೂರು ಮೆಟ್ರೋ‌ ರೈಲ್ ಕಾರ್ಪೋರೇಷನ್ ಲಿಮಿಟೆಡ್, ಮೂರನೇ ಮಹಡಿ, ಬಿಎಂಟಿಸಿ ಕಾಂಪ್ಲೆಕ್ಸ್, ಕೆ.ಎಚ್.ರಸ್ತೆ, ಶಾಂತಿನಗರ, ಬೆಂಗಳೂರು 560027 ಈ ವಿಳಾಸಕ್ಕೆ ಕಳುಹಿಸಬಹುದು.

READ | ಶಿವಮೊಗ್ಗ ದಲ್ಲಿ ಉದ್ಯೋಗ ಅವಕಾಶ, ಸ್ಥಳೀಯರಿಗೆ ಆದ್ಯತೆ, ವಯೋಮಿತಿ ಇಲ್ಲ, ಈಗಲೇ ಅರ್ಜಿ ಸಲ್ಲಿಸಿ

ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ ಎಂಬುವುದನ್ನು ಲಕೋಟೆಯ ಮೇಲೆ ಬರೆದಿರಬೇಕು ಎಂದು ಸೂಚನೆ ನೀಡಲಾಗಿದೆ (ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ಓದಬಹುದು).

JOB NOTIFICATION

CLICK HERE TO APPLY
ಅಭ್ಯರ್ಥಿಗಳು ಹೊಂದಿರಬೇಕಾದ ವಿದ್ಯಾರ್ಹತೆ ವಿವರ
ಡಿಪ್ಲೋಮಾ (diploma) ಕೋರ್ಸ್‌ ಅನ್ನು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಥವಾ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್/ ಟೆಲಿಕಮ್ಯೂನಿಕೇಷನ್ಸ್‌/ ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಕಮ್ಯೂನಿಕೇಷನ್ಸ್ ಎಂಜಿನಿಯರಿಂಗ್/ ಎಲೆಕ್ಟ್ರಿಕಲ್ ಪವರ್ ಸಿಸ್ಟಮ್ಸ್‌/ ಎಂಡಸ್ಟ್ರಿಯಲ್ ಎಲೆಕ್ಟ್ರಾನಿಕ್ಸ್‌/ ಮೆಕ್ಯಾನಿಕಲ್ ಎಂಜಿನಿಯರಿಂಗ್ ಇಲ್ಲವೇ ತತ್ಸಮಾನ ಶೈಕ್ಷಣಿಕ ಅರ್ಹತೆ/ ಮಿಲಿಟರಿ ಪಡೆ ನೀಡಿದ ತತ್ಸಮಾನ ವಿದ್ಯಾರ್ಹತೆಯಲ್ಲಿ ಮೊದಲ ಗ್ರೇಡ್‌ನಲ್ಲಿ ಉತ್ತೀರ್ಣರಾಗಿರಬೇಕು. ಈ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

 

https://www.suddikanaja.com/2021/09/30/jobs-in-bmrcl/

error: Content is protected !!