ಮರಾಠ ನಿಗಮದ ವಿರುದ್ಧ ಕನ್ನಡ ಪರ ಸಂಘಟನೆಗಳಿAದ ಮಲೆನಾಡಿನಲ್ಲಿ ಆಕ್ರೋಶ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಜ್ಯ ಸರ್ಕಾರ ಚುನಾವಣೆ ಹೊಸ್ತಿಲಲ್ಲಿ ಮರಾಠ ಮತ್ತು ವೀರಶೈವ ಲಿಂಗಾಯತ ಸಮುದಾಯ ಅಭಿವೃದ್ಧಿ ನಿಗಮ ಘೋಷಿಸಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಅದರ ಬೆನ್ನಲ್ಲೇ ಶಿವಮೊಗ್ಗದಲ್ಲೂ ಕನ್ನಡ ಸಂಘಟನೆಗಳು ಗುರುವಾರ ಮರಾಠ ನಿಗಮದ ವಿರುದ್ಧ ದನಿ ಎತ್ತಿವೆ.
ಕೂಡಲೇ ಸರ್ಕಾರ ಮರಾಠ ಅಭಿವೃದ್ದಿ ನಿಗಮ ರಚನೆ ನಿರ್ಧಾರ ಕೈಬಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಹಾಗೂ ಕರವೇ ಸ್ವಾಭಿಮಾನಿ ಬಣ ಆಗ್ರಹಿಸಿದೆ.
ಕರವೇ ಜಿಲ್ಲಾಧ್ಯಕ್ಷ ಮಂಜುನಾಥ್ ಎಸ್.ಕೋಟ್ಯಾನ್, ಮಂಜುನಾಥ್, ಸತೀಶ್, ಎನ್.ರಂಗನಾಥ್, ಸತ್ಯ ನಾರಾಯಣ, ಚಂದ್ರಶೇಖರ್, ಮಂಜುನಾಥ್ ಹಲವರು ಉಪಸ್ಥಿತರಿದ್ದರು.
ಕರವೇ ಸ್ವಾಭಿಮಾನಿ ಬಣದ ರವಿಪ್ರಸಾದ್, ಎಸ್.ಎಂ. ಮದುಸೂಧನ್, ರಘುನಂದನ್, ಎಂ.ನಯಾಜ್, ನೂರುಲ್ಲಾ, ಎಸ್.ಭರತ್, ಶಿವಕುಮಾರ್, ಅಮೃತ್, ಜಯಕೀರ್ತಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!