ವಿಮೆ ಹಣ ಕೇಳಲು ಹೋದ ಸೊಸೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಯತ್ನ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಪತಿ ಮೃತಪಟ್ಟ ಬಳಿಕ ವಿಮೆ ಹಣ ಕೇಳಲು ಹೋದ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಲಾಗಿದೆ.
ರಿಹಾನಾ ಬಾನು ಎಂಬುವವರ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಲಾಗಿದೆ. ಗಾಯಗೊಂಡ ಮಹಿಳೆಯು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಳು ವರ್ಷಗಳ ಹಿಂದೆ ಮದುವೆ

ಭದ್ರಾವತಿ ತಾಲೂಕಿನ ಹೊಳೆನೆಲ್ಕೆರೆ ಗ್ರಾಮದ ಇಮ್ರಾನ್ ಅಲಿ ಎಂಬುವವರೊಂದಿಗೆ ರಿಹಾನಾ ಅವರು ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. 14 ತಿಂಗಳು ಹಿಂದೆ ಇಮ್ರಾನ್ ಅವರು ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಪತಿಯ ಸಾವಿನ ಬಳಿಕ ರಿಹಾನಾ ಅವರು ಮಲ್ಲಿಗೆನಹಳ್ಳಿಯಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದರು.
ವಿಮೆಯ ನಾಮಿನಿ ತಾಯಿ ಹೆಸರಿನಲ್ಲಿತ್ತು. ಹೀಗಾಗಿ ಅವರ ಖಾತೆಗೆ ವಿಮೆ ಹಣ ಎರಡು ಲಕ್ಷ ರೂಪಾಯಿ ಜಮಾ ಮಾಡಲಾಗಿತ್ತು. ಹಣ ಕೇಳಲು ಹೋದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!