ಡಿ.30ರಂದು ಶಿವಮೊಗ್ಗದ ಬಹುಭಾಗದಲ್ಲಿ ಕರೆಂಟ್ ಇರಲ್ಲ

 

 

ಸುದ್ದಿ ಕಣಜ.ಕಾಂ | DISTRICT | POWER CUT
ಶಿವಮೊಗ್ಗ: ಹೊಳೆಹೊನ್ನೂರು 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿಸೆಂಬರ್ 30 ರಂದು ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ. ಈ ಪ್ರದೇಶದ ವ್ಯಾಪ್ತಿಗೊಳಪಡುವ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪ್ರದೇಶದಲ್ಲೂ ಪವರ್ ಕಟ್
ನಗರ ಉಪ ವಿಭಾಗ-2ರ ಘಟಕ-5 ಮತ್ತು ಘಟಕ-6 ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 11 ಕೆವಿ ನಿರ್ವಹಣೆ ಕಾಮಗಾರಿ ಇರುವ ಕಾರಣ ಕೆಳಕಂಡ ಪ್ರದೇಶದಲ್ಲಿ ಡಿ.30 ರ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಮಂಡ್ಲಿ ಸರ್ಕಲ್, ಸಿದ್ದೇಶ್ವರ ರೈಸ್‍ಮಿಲ್ ಪರಿವರ್ತಕ, ಮುರಾದ್‍ನಗರ 1ನೇ ಕ್ರಾಸ್‍ನಿಂದ 6ನೇ ಕ್ರಾಸ್, ಅಹಮದ್ ನಗರ, ಇಮಾಮ್ ಬಡಾ, ದಿಲ್ಲಿ ದರ್ಬಾರ್, ಶಿವಶಂಕರ್ ರೈಸ್‍ಮಿಲ್, ಕ್ರೌನ್ ಪ್ಯಾಲೆಸ್, ತಹಾ ಶಾದಿಮಹಲ್, ಜಗ್ಗಣ್ಣ ಕ್ಯಾಂಟೀನ್ ರಸ್ತೆ, ವಾದಿಉದಾ, ಸೂಳೆಬೈಲು, ಪುಟ್ಟಪ್ಪ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಗೋಪಿಶೆಟ್ಟಿಕೊಪ್ಪ, ಜಿ.ಎಸ್.ಕ್ಯಾಸ್ಟಿಂಗ್ ಫ್ಯಾಕ್ಟರಿ, ಇಲಿಯಾಜ್ ನಗರ 1ನೇ ಕ್ರಾಸ್‍ನಿಂದ 13ನೇ ಕ್ರಾಸ್, ಸಿದ್ದೇಶ್ವರ ಸರ್ಕಲ್, ಚಾಲುಕ್ಯನಗರ, ಕೆಹೆಚ್‍ಬಿ ಕಾಲೋನಿ, ಮಂಡಕ್ಕಿ ಭಟ್ಟಿ, ಮೇಲಿನ ತುಂಗಾನಗರ, ಕೆಳಗಿನ ತುಂಗಾನಗರ, ಟಿಪ್ಪುನಗರ, ಮಂಜುನಾಥ ಬಡಾವಣೆ, ಖಾಜಿ ನಗರ 80 ಅಡಿ ರಸ್ತೆ, ಕಾಮತ್ ಲೇಔಟ್, ಹಳೇ ಗೋಪಿಶೆಟ್ಟಿಕೊಪ್ಪ, ಅಣ್ಣಾನಗರ, ಎಫ್ 6 ಕಲ್ಲೂರು ಮಂಡ್ಲಿ ಗ್ರಾಮಾಂತರ ಪ್ರದೇಶ. ಎನ್‍ಟಿ ರಸ್ತೆ, ಬಿ.ಎಚ್. ರಸ್ತೆ, ಓಟಿ ರಸ್ತೆ, ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ, ಊರುಗಡೂರು, ಮಲ್ಲಿಕಾರ್ಜುನ ಬಡಾವಣೆ, ಬುದ್ದನಗರ, ಅಮೀರ್ ಅಹ್ಮದ್ ಸರ್ಕಲ್, ಪಂಚವಟಿ ಕಾಲೋನಿ, ಮಾರ್ನಮಿಬೈಲು, ಮಂಜುನಾಥ ಬಡಾವಣೆ, ಮಿಳಘಟ್ಟ, ಆನಂದರಾವ್ ಬಡಾವಣೆ, ನ್ಯೂಮಂಡ್ಲಿ, ಗಾಂಧಿಬಜಾರ್, ಕುಂಬಾರ ಗುಂಡಿ, ಬಿ.ಬಿ.ರಸ್ತೆ, ಕೆ.ಆರ್.ಪುರಂ, ಸೀಗೆಹಟ್ಟಿ, ಸವಾಯಿಪಾಳ್ಯ, ಕುರುಬರ ಪಾಳ್ಯ, ಟಿ.ಎಸ್.ಆರ್.ರಸ್ತೆ, ರವಿವರ್ಮ ಬೀದಿ, ಮಾಕಮ್ಮನ ಕೇರಿ, ಆಜಾದ್‍ನಗರ, ಲಾಲ್ ಬಂದರ್ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಜೆ 5ರ ವರೆಗೆ ವ್ಯತ್ಯಯ
ಹೊಸ 11 ಕೆವಿ. ಮಾರ್ಗದ ಕೆಲಸ ಇರುವುದರಿಂದ ಮಾರ್ಗಮುಕ್ತತೆ ನೀಡುತ್ತಿದ್ದು, ಡಿ.30 ರಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ಹಳೆಬೊಮ್ಮನಕಟ್ಟೆ, ಮಹಾರಾಣಿ ಶಾಲೆ ಹತ್ತಿರ, ದೇವಂಗ 2ನೇ ಹಂತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಈ ಪ್ರದೇಶದ ವ್ಯಾಪ್ತಿಗೊಳಪಡುವ ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪ ವಿಭಾಗ 1 ರ ಎಇಇ ತಿಳಿಸಿದ್ದಾರೆ.

error: Content is protected !!