Hindu Harsha | ಹಿಂದೂ ಹರ್ಷ ಹತ್ಯೆ ಪ್ರಕರಣದ ಮತ್ತೊಬ್ಬ ಆರೋಪಿಗೆ ಜಾಮೀನು

Harsha Hindu

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಇಡೀ ದೇಶದ ಗಮನವನ್ನೇ ತನ್ನತ್ತ ಸೆಳೆದ ಹೈಪ್ರೋಫೈಲ್ ಕೇಸ್ ಆದ ಹಿಂದೂ ಹರ್ಷ(Hindu Harsha)ನ ಹತ್ಯೆ ಪ್ರಕರಣದ ಒಂಭತ್ತನೇ ಆರೋಪಿಗೆ ಎನ್.ಐ.ಎ ವಿಶೇಷ ನ್ಯಾಯಾಲಯ (NIA Special court) ಜಾಮೀನು ಮಂಜೂರು ಮಾಡಿದೆ.

READ | ಶಿವಮೊಗ್ಗದಲ್ಲಿ ನಾಳೆ ಮಾಂಸ ಮಾರಾಟಕ್ಕೆ ನಿಷೇಧ, ಕಾರಣವೇನು? 

ನದೀಮ್ ವಿರುದ್ಧ ಆಶ್ರಯ ಒದಗಿಸಿದ ಆರೋಪ
ಪ್ರಕರಣದ 9ನೇ ಆರೋಪಿಯಾದ ಸೈಯದ್ ನದೀಮ್’ಗೆ ಜಾಮೀನು ನೀಡಲಾಗಿದೆ. ಈತನ ವಿರುದ್ಧ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪವಿದೆ. ಈತನ ವಿರುದ್ಧ ಯುಎಪಿಎ ಅಡಿ ಪ್ರಕರಣ ಸಹ ದಾಖಲಾಗಿಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಲಾಗಿದೆ.
ಹತ್ಯೆ ಪ್ರಕರಣದ 10ನೇ ಆರೋಪಿ ಜಾಫರ್ ಸಾದೀಕ್’ಗೆ ನ್ಯಾಯಾಲಯವು ಅಕ್ಟೋಬರ್ 13ರಂದು ಜಾಮೀನು ಮಂಜೂರು ಮಾಡಿತ್ತು.

error: Content is protected !!