
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಮಾಡಲ್ ಸಬ್ ಡಿವಿಷನ್ ಯೋಜನೆಯಡಿ 11 ಕೆ.ವಿ. ಯು.ಜಿ. ಕೇಬಲ್ ಚಾಚಿರ್ಂಗ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 26 ಮತ್ತು 27 ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮೆಸ್ಕಾಂ ಪ್ರಕಟಣೆ ಕೋರಿದೆ.
READ | ಶಿವಮೊಗ್ಗಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ, ಯಾವ್ಯಾವ ಕಾರ್ಯಕ್ರಮಗಳಲ್ಲಿ ಭಾಗಿ?
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಶಂಕರಮಠ ರಸ್ತೆ, ಸೋಮಯ್ಯ ಲೇಔಟ್, ಜೋಸೆಫ್ ನಗರ, ಮೆಹಂದಿ ನಗರ, ಬಾಲರಾಜ್ ಅರಸ್ ರಸ್ತೆ, ಬಸವನಗುಡಿ, ಟ್ಯಾಂಕ್ ಮೊಹಲ್ಲಾ, ಬಾಪೂಜಿನಗರ, ಕೆ.ಇ.ಬಿ.ಸರ್ಕಲ್, ಗೂಡ್ಸ್ ಶೆಡ್, ರೈಲ್ವೆ ಸ್ಟೇಷನ್ ಬ್ಲಡ್ ಬ್ಯಾಂಕ್ ರಸ್ತೆ, ವಿನಾಯಕ ನಗರ, ಇಂಡೋರ್ ಸ್ಟೇಡಿಯಂ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.