ಡಾಲಿ ಧನಂಜಯ್ ಶಿವಮೊಗ್ಗ ಭೇಟಿ, ಲಕ್ಷ್ಮೀ ಟಾಕೀಸ್‍ನಲ್ಲಿ ನೂಕುನುಗ್ಗಲು

 

 

ಸುದ್ದಿ ಕಣಜ.ಕಾಂ | KARNATAKA | ENTERTAINMENT NEWS
ಶಿವಮೊಗ್ಗ: ಚಲನಚಿತ್ರ ನಟ ಡಾಲಿ ಧನಂಜಯ್ (dolly dhananjay) ಅವರು ಭಾನುವಾರ ಶಿವಮೊಗ್ಗಕ್ಕೆ ಭೇಟಿ ನೀಡಿದರು.
ನಗರದ ಲಕ್ಷ್ಮೀ ಟಾಕೀಸ್ ನಲ್ಲಿ ಅವರ `ಬಡವ ರ‌್ಯಾಸ್ಕಲ್’ (badava rascal) ಚಿತ್ರ ಪ್ರದರ್ಶನಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪ್ರಮೋಷನ್ ಗಾಗಿ ಬಂದಿದ್ದ ಅವರನ್ನು ಅಭಿಮಾನಿಗಳು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಹೂವಿನ ಹಾರ ಹಾಕಿ ಬರಮಾಡಿಕೊಳ್ಳಲಾಯಿತು.

VIDEO REPORT | DOLLY AT SHIVAMOGGA

READ | ಬೆಂಗಳೂರು-ತಾಳಗುಪ್ಪ ರೈಲು 5 ದಿನ ರದ್ದು, ಯಾವ ದಿನಾಂಕಗಳಂದು ರೈಲು ಸಂಚರಿಸಲ್ಲ

ಸೆಲ್ಫಿಗಾಗಿ ನೂಕುನುಗ್ಗಲು, ಪೊಲೀಸರಿಗೆ ಕಷ್ಟ

ತಮ್ಮ ಬಡವ ರ‌್ಯಾಸ್ಕಲ್ ಚಿತ್ರದ ಪ್ರಮೋಷನ್ ಗೋಸ್ಕರ ಬಂದಿದ್ದ ನಟ ಡಾಲಿ ಧನಂಜಯ್ ಅವರನ್ನು ನೋಡುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಅವರ ಕಾರಿನ ಸುತ್ತಲೂ ಫ್ಯಾನ್ಸ್ ಗಳು ಆವೃತ್ತವಾಗಿದ್ದರು. ಕಾರಿನಿಂದ ಕೆಳಗಿಳಿದು ಲಕ್ಷ್ಮೀ ಟಾಕೀಸ್ ಒಳಗೆ ಹೋಗಬೇಕೆನ್ನುವಷ್ಟರಲ್ಲಿ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಹಾಗಾಗಿ, ಒಳಗಡೆ ಪ್ರವೇಶಿಸುವುದಕ್ಕೂ ಸಮಸ್ಯೆಯಾಯಿತು. ಪೊಲೀಸರು ಅವರನ್ನು ಅಭಿಮಾನಿಗಳನ್ನು ನಿಯಂತ್ರಿಸುವ ಹೊತ್ತಿಗೆ ಸುಸ್ತಾದರು. ಎಷ್ಟೇ ಸೂಚಿಸಿದರೂ ಯಾರೊಬ್ಬರು ತಲೆಕೆಡಿಸಿಕೊಳ್ಳಲಿಲ್ಲ. `ಡಾಲಿ’ ಬಂದಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಹಲವೆಡೆಯಿಂದ ಜನರು ಚಿತ್ರಮಂದಿರದ ಹತ್ತಿರ ಸೇರಿದರು.

Dolly Dhananjaya 2
ಅಭಿಮಾನಿಗಳನ್ನು ಉದ್ದೇಶಿತ ಮಾತನಾಡುತ್ತಿರುವ ನಟ ಡಾಲಿ ಧನಂಜಯ್.

https://www.suddikanaja.com/2021/09/15/sandalwood-actors-condemn-bhadravathi-dogs-kill-case/

error: Content is protected !!