ಭದ್ರಾವತಿಯಲ್ಲಿ ಭಾರಿ ಅಗ್ನಿ ಅನಾಹುತ, 11 ಗಂಟೆಯಿಂದ ಬೆಂಕಿ ನಂದಿಸುತಿದ್ದರೂ ಕಂಟ್ರೋಲ್ ಗೆ ಬರದ ಬೆಂಕಿ ಕೆನ್ನಾಲಿಗೆ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ಮಂಜುನಾಥ್ ಸಾ ಮಿಲ್ ನಲ್ಲಿ ಬುಧವಾರ ತಡ ರಾತ್ರಿ ದಿಢೀರ್ ಅಗ್ನಿ ಅವಘಡ ಸಂಭವಿಸಿದ್ದು, ಭಾರಿ ಅನಾಹುತ ಸೃಷ್ಟಿಯಾಗಿದೆ. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಳೆದ 11 ಗಂಟೆಗಳಿಂದ ಅಗ್ನಿ ನಂದಿಸುವ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ. ಆದರೆ, ಇದುವರೆಗೆ ಅಗ್ನಿಯ ಕೆನ್ನಾಲಿಗೆ ಹದ್ದುಬಸ್ತಿಗೆ ಬರುತ್ತಿಲ್ಲ.
ಸಾ ಮಿಲ್ ನಲ್ಲಿ ರಾಶಿ ರಾಶಿ ಮರದ ದಿಮ್ಮಿಗಳಿದ್ದು, ಬೆಂಕಿ ತಾಕಿದೆ. ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ 9 ಠಾಣೆ ಅಧಿಕಾರಿಗಳು ಸೇರಿ ಒಟ್ಟು 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

VIDEO REPORT

READ  | Weekend curfew ಗೆ ಸಚಿವ ಈಶ್ವರಪ್ಪ ವಿರೋಧ, ಅವರು ನೀಡಿದ ಟಾಪ್ 3 ಕಾರಣ ಇಲ್ಲಿವೆ

ಸುಮಾರು ರಾತ್ರಿ 11 ಗಂಟೆಯಿಂದ 3 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುತ್ತಿದ್ದರೆ, ಇನ್ನುಳಿದ ವಾಹನಗಳು ನೀರು ಪೂರೈಸುವ ಕೆಲಸ ಮಾಡುತ್ತಿವೆ. ಇದುವರೆಗೆ ಶೇ.70ರಷ್ಟು ಬೆಂಕಿ ನಂದಿಸಲಾಗಿದೆ. ಇನ್ನುಳಿದ ಕೆಂಡಗಳನ್ನು ನಂದಿಸಬೇಕಿದೆ. ಇಲ್ಲದಿದ್ದರೆ ಇನ್ನೊಮ್ಮೆ ಬೆಂಕಿ ಪಸರಿಸುವ ಭೀತಿಯೂ ಇದೆ.

ಅಕ್ಕಪಕ್ಕದ ಅಂಗಡಿ, ಮನೆಗಳಿಗೆ ಬೆಂಕಿ ಸ್ಪರ್ಶ
ಸಾ ಮಿಲ್ ಪಕ್ಕ ಮೂರು ಅಂಗಡಿಗಳಿದ್ದು, ಅವುಗಳಿಗೂ ಬೆಂಕಿ ಆವರಿಸಿತ್ತು. ಮನೆಗಳಿಗೂ ಬೆಂಕಿ ಸ್ಪರ್ಶಿಸಿತ್ತು. ತಕ್ಷಣ ಅವುಗಳಿಗೆ ತಗುಲಿದ್ದ ಬೆಂಕಿಯನ್ನು ನಂದಿಸಲಾಗಿದೆ. ಇಲ್ಲದಿದ್ದರೆ ಮನೆಯಿಂದ ಮನೆಗಳಿಗೆ ಬೆಂಕಿ ವ್ಯಾಪಿಸುವ ಸಾಧ್ಯತೆಯೂ ಇತ್ತು ಎಂದು ಮೂಲಗಳು ತಿಳಿಸಿವೆ.

ಕೂದಲೆಳೆಯಲ್ಲೇ ಶೋರೂಂ ಸೇಫ್
ಬೆಂಕಿ ತಾಕಿರುವ ಜಾಗದ ಪಕ್ಕದಲ್ಲಿಯೇ ಶೋರೂಂ ಕೂಡ ಇದೆ. ಒಂದುವೇಳೆ, ಅಗ್ನಿಯು ದೊಡ್ಡ ದಿಮ್ಮಿಗಳಿಗೆ ವ್ಯಾಪಿಸಿದಿದ್ದರೆ ಶೋರೂಂ ಸೇರಿದಂತೆ ಇನ್ನಷ್ಟು ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗುವ ಸಾಧ್ಯತೆ ಇತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿ ಸಂಭವಿಸಿರಬಹುದಾದ ಸಾಧ್ಯತೆ ಇದೆ. ಇದುವರೆಗೆ ಸಾ ಮಿಲ್ ಮಾಲೀಕರು ಘಟನಾ ಸ್ಥಳಕ್ಕೆ ಬಂದಿಲ್ಲ. ಯಾರದ್ದೆಂದು ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ, ನಷ್ಟವನ್ನೂ ಅಂದಾಜಿಸಿಲ್ಲ. ಅಗ್ನಿಶಾಮಕ ಠಾಣೆಯ ಸಿಬ್ಬಂದಿಯ ತಮ್ಮ ಜೀವವನ್ನೂ ಲೆಕ್ಕಿಸದೇ ಕಾರ್ಯಾಚರಣೆ ಮಾಡುತ್ತಿದ್ದಾರೆ. ಇನ್ನಷ್ಟು ಮಾಹಿತಿ ಲಭ್ಯವಾಗಿದೆ.

https://www.suddikanaja.com/2020/11/11/fire-bnglr/

error: Content is protected !!