‘ಮೇಕೆದಾಟು ಪಾದಯಾತ್ರೆ’ ಬಗ್ಗೆ ಈಶ್ವರಪ್ಪ ಗಂಭೀರ ಆರೋಪ, ಡಿಕೆಶಿ ವಿರುದ್ಧ ಕಟು ಟೀಕೆ

 

 

ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ, ಡಿ.ಕೆ.ಶಿವಕುಮಾರ್ ಅವರ ವಿರುದ್ಧ ನಗರದಲ್ಲಿ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ಸಚಿವ ಈಶ್ವರಪ್ಪ ಮಾಡಿರುವ ಆರೋಪಗಳೇನು?
  1. ಕಾಂಗ್ರೆಸ್ ಪಾದಯಾತ್ರೆಯಿಂದ ರಾಜ್ಯದ ಜನರಿಗೆ ನೀರು ಪೂರೈಕೆಯಾಗಲ್ಲ, ಕೊರೊನಾ ಹಬ್ಬಲಿದೆ.
  2. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆಯ ಮೂಲಕ `ಚಾಂಪಿಯನ್’ ಆಗಲು ಹೊರಟಿದ್ದಾರೆ. ಮುಖ್ಯಮಂತ್ರಿ ಆಗುವ ಕನಸು ಹೊತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ.
  3. ಕೊರೊನಾ ವೈರಾಣುವಿನ ಸೋಂಕು ಕಾಂಗ್ರೆಸ್ ಕಾರ್ಯಕರ್ತರಿಗೆ ಹಬ್ಬಿಸುವ ಅಧಿಕಾರ ಸೋನಿಯಾ ಗಾಂಧಿ ಅವರು ನೀಡಿದ್ದಾರಾ? ಇಲ್ಲಿ ಪಾಲ್ಗೊಂಡವರು ರಾಜ್ಯದ ನಾನಾ ಜಿಲ್ಲೆಗಳಿಗೆ ವಾಪಸ್ ಹೋಗುವುದರಿಂದ ಅವರ ಮೂಲಕ ಸೋಂಕು ಹರಡುವ ಸಾಧ್ಯತೆಯೂ ಇದೆ.
  4. ಸಿದ್ದರಾಮಯ್ಯ ಅವರು ಜ್ವರದಿಂದ ಈಗಾಗಲೇ ವಾಪಸ್ ಬಂದಿದ್ದಾರೆ. ಅವರೆಲ್ಲರ ಆರೋಗ್ಯದ ಹಿತಕ್ಕಾಗಿಯೇ ಪಾದಯಾತ್ರೆ ಬೇಡ ಎಂಬ ಸಲಹೆ ನೀಡಿದ್ದೆ. ಆದರೆ, ಕಾಂಗ್ರೆಸ್ ಇದರಲ್ಲೂ ರಾಜಕೀಯ ಮಾಡುತ್ತಿದೆ.

https://www.suddikanaja.com/2021/01/18/condemn-in-social-media-for-not-using-kannada-in-raf-foundation-stone/

error: Content is protected !!