ಶಿವಮೊಗ್ಗದಲ್ಲಿ ಒಂದು ವರ್ಷದಲ್ಲಿ ₹16 ಲಕ್ಷ ದಂಡ

 

 

ಸುದ್ದಿ‌ ಕಣಜ.ಕಾಂ | DISTRICT | PENALTY
ಶಿವಮೊಗ್ಗ: ಜಿಲ್ಲೆಯಲ್ಲಿ 2021-22 ನೇ ಸಾಲಿನಲ್ಲಿ 2021ರ ಏಪ್ರಿಲ್ ನಿಂದ ಡಿಸೆಂಬರ್ ರವರೆಗೆ ಕಾನೂನು ಮಾಪನಶಾಸ್ತ್ರ ಇಲಾಖೆ ( legal metrology department) ಯಿಂದ ₹16,25,800 ದಂಡ (penalty) ವಿಧಿಸಲಾಗಿದೆ‌ ಎಂದು ಇಲಾಖೆಯ ಸಹಾಯಕ ನಿಯಂತ್ರಕ (Asst controller) ಎಸ್.ಮಂಜುನಾಥ್ ತಿಳಿಸಿದ್ದಾರೆ.

READ | ಶಿವಮೊಗ್ಗದಲ್ಲಿ ಮಗುವಿನ ‘ಶೂ’ವೊಳಗೆ ಅವಿತಿದ್ದ ಮೂರಡಿ ಹಾವು!

ತೂಕ, ಅಳತೆ ಸಾಧನಗಳ ಸತ್ಯಾಪನೆ/ಮುದ್ರೆಯಿಂದ ಸಂಗ್ರಹಿಸಿದ ಶುಲ್ಕ ₹1,11,39,428 ಆಗಿರುತ್ತದೆ. ತಪಾಸಣೆ ಮಾಡಿರುವ ವ್ಯಾಪಾರಸ್ಥರ ಮತ್ತು ಕೈಗಾರಿಕೆಗಳ ಸಂಖ್ಯೆ 2105, ತಪ್ಪಿತಸ್ಥರ ಮೇಲೆ ಹೂಡಿರುವ ಮೊಕದ್ದಮೆಗಳ ಸಂಖ್ಯೆ 867 ಆಗಿರುತ್ತದೆ. ರಾಜಿ ಅಭಿಸಂಧಾನ ಮಾಡಿರುವ ಮೊಕದ್ದಮೆಗಳ ಸಂಖ್ಯೆ 884 ಆಗಿದ್ದು, ಇದರಲ್ಲಿ ₹16,25,800 ದಂಡ ವಿಧಿಸಲಾಗಿದೆ.

error: Content is protected !!