ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗದ ಡಾ. ಬಾಬು ಜನ ಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ನಗರದ ನೆಹರೂ ರಸ್ತೆ, ಬಸವ ಸದನ ಕಾಂಪ್ಲೆಕ್ಸ್ ನ ಲಿಡ್ಕರ್ ಮಾರಾಟ ಮಳಿಗೆಯಲ್ಲಿ ಗೌರಿ ಹಬ್ಬದ ಪ್ರಯುಕ್ತ ಅಪ್ಪಟ ಚರ್ಮ ವಸ್ತುಗಳ ಮೇಲೆ ಶೇ.20 ರಿಯಾಯಿತಿ ದರದಲ್ಲಿ ಸೆ.20ರ ವರೆಗೆ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ನಿಗಮದ ವ್ಯವಸ್ಥಾಪಕರು/ಜಿಲ್ಲಾ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9480886268 ನ್ನು ಸಂಪರ್ಕಿಸುವುದು.