ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2023-24ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಿದ್ದು, ಕಾರಣಾಂತರದಿಂದ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳ ಆಯ್ಕೆ ಸ್ಪರ್ಧೆಯ ದಿನಾಂಕಗಳು ಬದಲಾವಣೆಗೊಂಡಿದೆ.
READ | ಫಾರಂ ನಂ.57 ವಿಲೇಗೆ ಹೊಸ ಆ್ಯಪ್, ಇಲ್ಲಿ ಸಿಗಲಿದೆ 15 ವರ್ಷಗಳ ಸೆಟಲೈಟ್ ಇಮೇಜ್!
ಶಿವಮೊಗ್ಗ ತಾಲೂಕು ಆಯ್ಕೆ ಸ್ಪರ್ಧೆಯು ಸೆ.22 ರಂದು ನಗರದ ನೆಹರೂ ಕ್ರೀಡಾಂಗಣದಲ್ಲಿ ಹಾಗೂ ಭದ್ರಾವತಿ ತಾಲೂಕು ಆಯ್ಕೆ ಸ್ಪರ್ಧೆಯು ಸೆ.24 ರಂದು ಭದ್ರಾವತಿಯ ವಿ.ಐ.ಎಸ್.ಎಲ್.ಕ್ರೀಡಾಂಗಣದಲ್ಲಿ ನಡೆಸಲಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ನಿಗದಿಪಡಿಸಿದ ದಿನಾಂಕದಂದು ಬೆಳಗ್ಗೆ 10ರೊಳಗಾಗಿ ಕ್ರೀಡಾಕೂಟ ನಡೆಯುವ ಕ್ರೀಡಾಂಗಣದಲ್ಲಿ ಸಂಬಂಧಪಟ್ಟವರಲ್ಲಿ ವರದಿ ಮಾಡಿಕೊಂಡು ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸ್ಮಾರ್ಟ್ ಸಿಟಿಯಿಂದ ಅಹವಾಲು ಸ್ವೀಕಾರ ಸಭೆ
SHIMOGA: ಶಿವಮೊಗ್ಗ ಸ್ಮಾರ್ಟ್ ಸಿಟಿ ವತಿಯಿಂದ ಅನುಷ್ಠಾನಗೊಳಿಸಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲುಗಳನ್ನು ಸ್ವೀಕರಿಸುವ ಮತ್ತು ಇವುಗಳಿಗೆ ಪರಿಹಾರಾತ್ಮಕ ಕ್ರಮಗಳ ಬಗ್ಗೆ ಚರ್ಚಿಸಲು ಸೆ.12 ರಂದು ಮಧ್ಯಾಹ್ನ 3ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಅಹವಾಲು ಸ್ವೀಕಾರ ಸಭೆಯನ್ನು ಏರ್ಪಡಿಸಲಾಗಿದೆ.
ಈ ಸಭೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಆಗಮಿಸಿ ತಮ್ಮ ಕುಂದುಕೊರತೆಗಳನ್ನು ಲಿಖಿತವಾಗಿಯಾಗಲೀ ಅಥವಾ ಮೇಲ್ ಮೂಲಕವಾಗಿಯಾಗಲೀ ಅಥವಾ ಖುದ್ದಾಗಿ ಆಗಲಿ ಸಲ್ಲಿಸುವಂತೆ ಶಿವಮೊಗ್ಗ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇ-ಮೇಲ್ shimogasmartcity@gmail.com ಮತ್ತು ವಾಟ್ಸ್ಪ್ ನಂ. 9480022672 ಇವುಗಳಿಗೆ ಅಹವಾಲು ಸಲ್ಲಿಸುವವರು ಸೆ. 11 ರೊಳಗಾಗಿ ಸಲ್ಲಿಸುವುದು.
Dasara Sports | ದಸರಾ ಕ್ರೀಡಾಕೂಟ, ಯಾವ ತಾಲೂಕಿನಲ್ಲಿ ಯಾವಾಗ ಸ್ಪರ್ಧೆ?