ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲಾಡಳಿತ (shivamogga district administration), ಜಿಲ್ಲಾ ಪಂಚಾಯಿತಿ (zilla panchayat), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 2023-24 ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ ಆಯ್ಕೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
READ | ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರ, ಮನೆಗೆ ಬರಲಿದೆ ನೋಟಿಸ್, ಯಾವಾಗಿಂದ ಅನ್ವಯ?
ಯಾವ ದಿನ ಎಲ್ಲಿ ಸ್ಪರ್ಧೆ?
- ಸೆಪ್ಟೆಂಬರ್ 3ರಂದು ಸೊರಬ ತಾಲೂಕು ಕ್ರೀಡಾಂಗಣ
- ಸೆಪ್ಟೆಂಬರ್ 7ರಂದು ಹೊಸನಗರ ತಾಲೂಕು ಕ್ರೀಡಾಂಗಣ
- ಸೆಪ್ಟೆಂಬರ್ 10ರಂದು ಭದ್ರಾವತಿ ವಿ.ಐ.ಎಸ್.ಎಲ್ ಕ್ರೀಡಾಂಗಣ ಮತ್ತು ಸಾಗರ ನೆಹರೂ ಮೈದಾನ
- ಸೆಪ್ಟೆಂಬರ್ 16ರಂದು ಶಿವಮೊಗ್ಗ ನೆಹರೂ ಕ್ರೀಡಾಂಗಣ
- ಸೆಪ್ಟೆಂಬರ್ 24ರಂದು ಶಿಕಾರಿಪುರ ತಾಲೂಕು ಕ್ರೀಡಾಂಗಣ
- ಸೆಪ್ಟೆಂಬರ್ 30ರಂದು ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಕ್ರೀಡಾಕೂಟ
ಏನೆಲ್ಲ ನಿಯಮಗಳು ಅನ್ವಯ?
ಅಥ್ಲೆಟಿಕ್ಸ್, ವಾಲಿಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಸ್ಪರ್ಧೆಗಳನ್ನು ಮಾತ್ರ ಏರ್ಪಡಿಸಲಾಗಿದ್ದು, ಆಯಾ ತಾಲೂಕಿನ ಕ್ರೀಡಾಪಟುಗಳು ಆಯಾ ತಾಲೂಕಿನ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಅರ್ಹತೆ ಪಡೆದಿರುತ್ತಾರೆ. ಭಾಗವಹಿಸುವ ಸಮಯದಲ್ಲಿ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು. ಗುಂಪು ಸ್ಪರ್ಧೆಗಳನ್ನೇರ್ಪಡಿಸಲು ಕನಿಷ್ಠ 4 ತಂಡಗಳು ಇರಬೇಕು, ಇಲ್ಲದಿದ್ದಲ್ಲಿ ಆಯ್ಕೆ ನಡೆಸಿ ಮುಂದಿನ ಹಂತಕ್ಕೆ ಕಳುಹಿಸಲಾಗುವುದು. ಒಬ್ಬರಿಗೆ ಎರಡು ವೈಯುಕ್ತಿಕ ಹಾಗೂ ಒಂದು ಗುಂಪು ಸ್ಫರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಆಸಕ್ತ ಕ್ರೀಡಾಪಟುಗಳು ಆಯಾ ದಿನಾಂಕಗಳಂದು ಆಯಾ ತಾಲೂಕಿನ ಕ್ರೀಡಾಂಗಣದಲ್ಲಿ ಬೆಳಗ್ಗೆ 10ರೊಳಗಾಗಿ ಹಾಜರಿದ್ದು, ಸಂಬಂಧಪಟ್ಟವರಲ್ಲಿ ವರದಿ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಿಲ್ಲಾ ಮಟ್ಟದ ಫುಟ್ಬಾಲ್ ಮತ್ತು ಹಾಕಿ ಸ್ಪರ್ಧೆ
SHIMOGA: ಶಾಲಾ ಶಿಕ್ಷಣ ಇಲಾಖೆಯು 2023-24 ನೇ ಸಾಲಿನ 14 ರಿಂದ 17 ವರ್ಷದೊಳಗಿನ ಬಾಲಕ/ ಬಾಲಕಿಯರ ಫುಟ್ಬಾಲ್ ಮತ್ತು ಹಾಕಿ ಕ್ರೀಡೆಗಳ ಆಯ್ಕೆ ಪ್ರಕ್ರಿಯೆಯನ್ನು ಆ.29 ಮತ್ತು 30 ರಂದು ನಡೆಸಲು ತೀರ್ಮಾನಿಸಲಾಗಿದೆ.
ಫುಟ್ಬಾಲ್ ಸ್ಪರ್ಧೆಯನ್ನು ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ ಆವರಣದಲ್ಲಿ ಹಾಗೂ ಹಾಕಿ ಸ್ಪರ್ಧೆಯನ್ನು ನೆಹರು ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಅಂದು ಬೆಳಗ್ಗೆ 9.30 ಗಂಟೆಯೊಳಗಾಗಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳ ಸರ್ಕಾರಿ/ ಅನುದಾನಿತ/ ಅನುದಾನ ರಹಿತ ಪ್ರಾಥಮಿಕ/ ಪ್ರೌಢ ಶಾಲೆಗಳ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಅಗತ್ಯ ದಾಖಲಾತಿಗಳೊಂದಿಗೆ ವರದಿ ಮಾಡಿಕೊಳ್ಳವಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೈಶಿಶಿ ಮೈಕಲ್ ಕಿರಣ್ ದೂ.ಸಂ: 93808660099 / 9886898633 ಗಳನ್ನು ಸಂಪರ್ಕಿಸುವುದು.