ಶಿವಮೊಗ್ಗದಲ್ಲಿ ಪೊಲೀಸ್ ಸೈರನ್ ಸದ್ದು, ಎಲ್ಲೆಲ್ಲಿ ನಡೀತು ಕಾರ್ಯಾಚರಣೆ?

 

 

ಸುದ್ದಿ ಕಣಜ.ಕಾಂ | CITY | FOOTPATH 
ಶಿವಮೊಗ್ಗ: ನಗರದ ವಿವಿಧೆಡೆ ಶುಕ್ರವಾರ ಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಬಿ.ಎಚ್.ರಸ್ತೆ, ಕರ್ನಾಟಕ ಸಂಘದ ಮೈನ್ ಮಿಡ್ಲ್ ಶಾಲೆ ಮುಂಭಾಗದ ಡಬ್ಬಲ್ ರಸ್ತೆಯಲ್ಲಿ ಪಾದಾಚಾರಿ ರಸ್ತೆಯನ್ನು ಆಕ್ರಮಿಸಿಕೊಂಡ ಬೀದಿ ಬದಿ ವ್ಯಾಪಾರಿಗಳು ಹಾಗೂ ಅಂಗಡಿ ಮಾಲೀಕರ ಸಾಮಗ್ರಿಗಳನ್ನು ತೆರವುಗೊಳಿಸಲಾಯಿತು.

ಶಿವಮೊಗ್ಗದ ವಿವಿಧೆಡೆ ಹೇಗೆ ನಡೀತು ತೆರವು ಕಾರ್ಯಾಚರಣೆ ಇಲ್ಲಿದೆ ವಿಡಿಯೋ ರಿಪೋರ್ಟ್

ದೊಡ್ಡ ಅಂಗಡಿಗಳವರು ಸಹ ಪಾದಾಚಾರಿ ರಸ್ತೆಯ ಮೇಲೆ ತಮ್ಮ ಅಂಗಡಿಯ ನಾಮಫಲಕ, ಮಳಿಗೆಯಲ್ಲಿ ಇರುವ ದಿನಸಿ ಸಾಮಾನುಗಳು ಬೀದಿ ಬದಿಯಲ್ಲಿ ಇಟ್ಟು ವ್ಯಾಪಾರ ಮಾಡುತ್ತಿರುವ ಸರಕು ಸಾಮಗ್ರಿಗಳನ್ನು ತೆಗೆಸಲಾಯಿತು. ಪಾಲಿಕೆಯಿಂದ ಗುರುತಿನ ಚೀಟಿ ಪಡೆದ ಫಲಾನುಭವಿಗಳು ತಮಗೆ ನೀಡಲಾಗಿರುವ ಜಾಗದಲ್ಲಿ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಲಾಯಿತು.

ಎಲ್ಲೆಲ್ಲಿ ನಡೆಯುತ್ತಿದೆ ತೆರವು ಕಾರ್ಯಾಚರಣೆ
ನಾನ್ ವೆಂಡರ್ ಜೋನ್ ಗಳಲ್ಲಿ ಯಾವ ಕಾರಣಕ್ಕೂ ವ್ಯಾಪಾರ ಮಾಡುವಂತಿಲ್ಲ. ಆದರೂ ಅಂತಹ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಿಸುವ ಕಾರ್ಯ ನಿರಂತರವಾಗಿ ಪೊಲೀಸ್ ಇಲಾಖೆ ನಡೆಯುತ್ತಿದೆ. ಇಂದು ಬಿ.ಎಚ್.ರಸ್ತೆಯಲ್ಲಿ ನಡೆಯಿತು.
ಇತ್ತೀಚೆಗೆ ಬಿ.ಎಚ್.ರಸ್ತೆಯ ಆಲ್ಕೋಳ, ಸರ್ಕಲ್, ಭಾರ್ಗವಿ ಪೆಟ್ರೋಲ್ ಬಂಕ್, ಪ್ರವಾಸಿ ಮಂದಿರ, ಮೆಗ್ಗಾನ್ ಆಸ್ಪತ್ರೆ, ಡಿವೈಎಸ್ಪಿ ಕಚೇರಿ ಮುಂಭಾಗ, ಸಿಮ್ಸ್ ಆಸ್ಪತ್ರೆ, ದೊಡ್ಡಪೇಟೆ ಠಾಣೆ ಎದುರು, ಖಾಸಗಿ ಬಸ್ ನಿಲ್ದಾಣದ ಬಳಿ, ಅಶೋಕ ವೃತ್ತ, ವಿನಾಯಕ ಟ್ಯಾಕೀಸ್ ರಾಯಲ್ ಆರ್ಕೆಡ್ ಎದುರು, ಎಸ್.ಸಿ.ಐ, ವಿನೋಬಾ ನಗರ ಎಪಿಎಂಸಿ ತರಕಾರಿ ಮಾರುಕಟ್ಟೆ, ಡಿವಿಎಸ್ ಶಾಲೆ ಬಳಿ, ಫ್ರೀಡಂ ಪಾರ್ಕ್, ಲಕ್ಷ್ಮೀ ಟ್ಯಾಕೀಸ್ ಹೀಗೆ ನಾನಾ ಕಡೆಗಳಲ್ಲಿ ನಿಯಮ ಮೀರಿ ಫುಟ್ ಪಾತ್ ಆಕ್ರಮಿಸಿಕೊಂಡ ಎಲ್ಲರಿಗೂ ತೆರವು ಮಾಡಲಾಗುತ್ತಿದೆ.

https://www.suddikanaja.com/2021/10/02/mahatma-gandhi-visited-shivamogga/

error: Content is protected !!