ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬೆದರಿಕೆಯೊಡ್ಡಿದ ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ.
ಹೊಸನಗರದ ಸಂತೋಷ್ (24), ಸುನೀಲ್ (26) ಬಂಧಿತರು. 17 ವರ್ಷದ ಬಾಲಕಿಯನ್ನು ಸುನೀಲ್ ನ ರೂಮಿಗೆ ಕರೆದುಕೊಂಡು ಹೋಗಿದ್ದಾರೆ. ನಂತರ, ಆಕೆಯ ಮೇಲೆ ಅತ್ಯಾಚಾರ ಮಾಡಿ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿಕೊಂಡು ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ.
ನಡೆದಿದ್ದೇನು?
ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಬಾಲಕಿಯು ಜನವರಿ 15ರಂದು ಮಧ್ಯಾಹ್ನ ತನ್ನ ಗ್ರಾಮಕ್ಕೆ ಹೋಗಲು ಹೊಸನಗರ ಬಸ್ ನಿಲ್ದಾಣದ ಬಳಿ ನಿಂತಿದ್ದಾಗ, ಈ ಹಿಂದೆ ಬಾಲಕಿಯ ಮನೆಗೆ ಜೆಸಿಬಿ ಕೆಲಸಕ್ಕೆಂದು ಬರುತ್ತಿದ್ದ ಸಮಯದಲ್ಲಿ ಪರಿಚಯವಾಗಿದ್ದ ಸಂತೋಷ್ ಮತ್ತು ಸುನೀಲ್ ಇಬ್ಬರು ಬಾಲಕಿಯನ್ನು ಕರೆದು ನಾವು ಕೂಡ ನಿಮ್ಮ ಗ್ರಾಮದ ಕಡೆಗೆ ಹೋಗುತ್ತೇವೆ. ನಮ್ಮ ಜೊತೆ ಕಾರಿನಲ್ಲಿ ಬಾ ಎಂದು ಆಕೆಯನ್ನು ಪುಸಲಾಯಿಸಿದ್ದಾರೆ. ಕಾರಿನಲ್ಲಿ ಕರೆದೊಯ್ದು ಕೃತ್ಯ ಎಸಗಿದ್ದಾರೆ.
ಬಾಲಕಿಯನ್ನು ಬರುವಂತೆ ಕರೆದಾಗ ಬಾಲಕಿಯು ನಿರಾಕರಿಸಿದ್ದರಿಂದ ವಿಡಿಯೋವನ್ನು ರಾಘವೇಂದ್ರ, ಸಚಿನ್ ಮತ್ತು ಸುಬ್ಬು ಎಂಬುವವರ ಮೊಬೈಲ್ ಗಳಿಗೆ ಕಳುಹಿಸಿರುತ್ತಾರೆಂದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನೊಂದ ಬಾಲಕಿಯು ನೀಡಿದ ಹೇಳಿಕೆ ದೂರಿನ ಮೇರೆಗೆ ಕಲಂ 363, 376(2)(ಎಫ್),506 ಆರ್.ಡಬ್ಲ್ಯು 34 ಐಪಿಸಿ ಮತ್ತು ಕಲಂ POCSO ಹಾಗೂ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಹೊಸನಗರ ಠಾಣೆ ಪಿಎಸ್ಐ, ಸಿಬ್ಬಂದಿ ತಂಡವು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2022/01/11/a-man-raped-a-minor-on-monday-at-tarikere-lodge-fir-lodge-against-accused-in-bhadravathi-paper-town-police-station/