ಮರದ ನೆರಳಲ್ಲಿ ಮಲಗಿಸಿದ್ದ ಮಗುವಿನ ಮೇಲಿಂದ ಹರಿದ ಟ್ರ್ಯಾಕ್ಟರ್

 

 

ಸುದ್ದಿ ಕಣಜ.ಕಾಂ| TALUK | CRIME NEWS
ಶಿವಮೊಗ್ಗ: ಮರದ ನೆರಳಿನಲ್ಲಿ ಮಗುವನ್ನು ಮಲಗಿಸಿದ್ದಾಗ ಟ್ರ್ಯಾಕ್ಟರ್ ಹರಿದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಹಾನಗಲ್ ಮೂಲದ ಕಾರ್ಮಿಕ ದಂಪತಿಯ ವರ್ಧನ್ (6) ಮೃತಪಟ್ಟ ಮಗು. ತಾಲೂಕಿನ ರೇಚಿಕೊಪ್ಪ ಸಮೀಪ ರಸ್ತೆ ಕಾಮಗಾರಿಗಾಗಿ ಬಂದಿದ್ದ ದಂಪತಿಯು ಊಟ ಮಾಡಿಸಿ ಮಗುವನ್ನು ಮರದ ನೆರಳಿನಲ್ಲಿ ಮಲಗಿಸಿದ್ದಾರೆ. ಆಗ ನೀರು ಹಾಕುತಿದ್ದ ಟ್ರ್ಯಾಕ್ಟರ್ ವೊಂದು ಹಿಮ್ಮುಖವಾಗಿ ಚಲಿಸಿ ಮಗುವಿನ ಮೇಲಿಂದ ಹರಿದಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!