Uranium Corporationನಲ್ಲಿ ಉದ್ಯೋಗ, ಕೈತುಂಬ ಸಂಬಳ, ಇಂದೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | NATIONAL | JOB JUNCTION
ಬೆಂಗಳೂರು: ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (Uranium Corporation of India Limited) ನಲ್ಲಿ ಖಾಲಿ ಇರುವ ಉದ್ಯೋಗಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 41 41 ಅಕೌಂಟ್ಸ್ ಆಫೀಸರ್, ಮೈನಿಂಗ್ ಮೇಟ್ ಭರ್ತಿ ಮಾಡಿಕೊಳ್ಳಲಾಗುವುದು.
ಜನವರಿ 27ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದ್ದು, ಫೆಬ್ರವರಿ 16 ಕೊನೆಯ ದಿನವಾಗಿದೆ. ಅರ್ಹರು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

JOBS FB Link

READ | ಪಿಯುಸಿ ಪಾಸ್ ಆದವರಿಗ ಉದ್ಯೋಗ ಅವಕಾಶ, ಈಗಲೇ ಅರ್ಜಿ ಸಲ್ಲಿಸಿ

ಸಿಎ, ಐಸಿಡಬ್ಲ್ಯುಎ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೈನಿಂಗ್ ಮೇಟ್ 38, ಅಕೌಂಟ್ಸ್ ಆಫೀಸರ್ 3 ಸೇರಿ ಒಟ್ಟು 41 ಹುದ್ದೆಗಳ ನೇಮಕಾತಿ ನಡೆಯಲಿದೆ.
ಟ್ರೇಡ್ ಟೆಸ್ಟ್, ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಮೈನಿಂಗ್ ಮೇಟ್ ಹುದ್ದೆಗೆ ಮಾಸಿಕ 35,904 ರೂಪಾಯಿ, ಅಕೌಂಟ್ಸ್ ಆಫೀಸರ್ ಹುದ್ದೆಗೆ 46,020 ರೂಪಾಯಿ ವೇತನ ನೀಡಲಾಗುವುದು..
ಆಯ್ಕೆಯಾದ ಅಭ್ಯರ್ಥಿಗಳಿಗೆ ಜಾರ್ಖಂಡ್ ನಲ್ಲಿ ಉದ್ಯೋಗ ಅವಕಾಶವಿದೆ. ಅರ್ಜಿಗಳನ್ನು ಜನರಲ್ ಮ್ಯಾನೇಜರ್, ಯುರೇನಿಯಂ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಪಿ.ಒ. ಜಡುಗುಡ ಮೈನ್ಸ್, ಸಿಂಗ್ ಭುಮ್ ಈಸ್ಟ್, ಜಾರ್ಖಂಡ್ 832102 ಇಲ್ಲಿಗೆ ಅರ್ಜಿಗಳನ್ನು ಕಳುಹಿಸಬಹುದು.

WEBSITE

https://www.suddikanaja.com/2022/01/20/application-called-for-shivamogga-smart-city-limited-recruitment-eligible-candidate-may-apply/

error: Content is protected !!